Promotion
ಬೆಂಗಳೂರು, ಸೆಪ್ಟೆಂಬರ್ 19, 2019 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಟೀಸರ್ ರಿಲೀಸ್ ದಿನ ಹತ್ತಿರ ಬಂದಿದೆ.
ಹೌದಿ. ಯುವರತ್ನ ಚಿತ್ರದ ಚಿತ್ರೀಕರಣ ಸಹ ಈಗಾಗಲೆ ಸಾಕಷ್ಟು ಮುಗಿದಿದೆ. ಸದ್ಯ ಮೈಸೂರಿನಲ್ಲಿ ಚಿತ್ರೀಕರಣ ಮಾಡುತ್ತಿದೆ ಚಿತ್ರತಂಡ.
ಚಿತ್ರದಲ್ಲಿ ಪವರ್ ಸ್ಟಾರ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿರುವ ಯುವರತ್ನ ಟೀಸರ್ ದಸರ ಹಬ್ಬಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ.