ಚಿರಂಜೀವಿ ಫಾರ್ಮ್ ಹೌಸ್ ನಲ್ಲಿ ಆಕಸ್ಮಿಕ ಬೆಂಕಿ: ಸೈರಾ ನರಸಿಂಹ ರೆಡ್ಡಿ ಶೂಟಿಂಗ್ ಸೆಟ್ ಬೆಂಕಿಗಾಹುತಿ

Promotion

ಹೈದರಾಬಾದ್:ಮೇ-3:(www.justkannada.in) ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ತೆಲುಗಿನ ಬಹುನಿರೀಕ್ಷಿತ ‘ಸೈರಾ ನರಸಿಂಹರೆಡ್ಡಿ’ ಸಿನಿಮಾ ಸೆಟ್‌ನಲ್ಲಿ ಅಗ್ನಿ ಅವಘಢ ಸಂಭವಿಸಿದೆ.

ಸೈರಾ ನರಸಿಂಹರೆಡ್ಡಿ ಚಿತ್ರದ ಶೂಟಿಂಗ್ ಗಾಗಿ ಹೈದರಾಬಾದ್ ಹೊರವಲಯದ ಕೋಕಾಪೇಟದಲ್ಲಿರುವ ಚಿರಂಜೀವಿ ಫಾಮ್‍ಹೌಸ್‌ನಲ್ಲಿ ಅದ್ದೂರಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಆದರೆ ಇಂದು ಬೆಳಗಿನ ಜಾವ ಸೆಟ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಅದಾಗಲೆ ಅರ್ಧದಷ್ಟು ಸೆಟ್ ಬೆಂಕಿಗೆ ಆಹುತಿಯಾಗಿದೆ.

ಅವಘಢದಲ್ಲಿ ಅಂದಾಜು 2 ಕೋಟಿ ರೂ.ವರೆಗೂ ಆಸ್ತಿ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಶಾರ್ಟ್‌ ಸರ್ಕ್ಯೂಟ್ ಕಾರಣದಿಂದ ಬೆಂಕಿ ಅವಗಢ ಸಂಭವಿಸಿದೆ.

ಚಿರಂಜೀವಿ ಫಾಮ್‍ಹೌಸ್‌ನಲ್ಲಿ ಹಾಕಿರುವ ಸೆಟ್‌ನಲ್ಲಿ ಸೈರಾಗೆ ಸಂಬಂಧಿಸಿದ ಕೆಲವು ಮುಖ್ಯ ಸನ್ನಿವೇಶಗಳನ್ನು ಚಿತ್ರೀಕರಿಕೊಳ್ಳಲಾಗುತ್ತಿದೆ. ಗುರುವಾರ ರಾತ್ರಿವರೆಗೂ ಶೂಟಿಂಗ್ ಮಾಡಿದ ಚಿತ್ರತಂಡ ಬಳಿಕ ಅಲ್ಲಿಂದ ನಿರ್ಗಮಿಸಿತ್ತು. ಅಲ್ಲಿ ಭದ್ರತಾ ಸಿಬ್ಬಂದಿ ಮಾತ್ರ ಇದ್ದರು. ಶುಕ್ರವಾರ ಬೆಳಗಿನ ಜಾವ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ.

ಮೆಗಾ ಸ್ಟಾರ್ ಚಿರಂಜೀವಿ ವೃತ್ತಿಬದುಕಿನಲ್ಲಿ ಅತ್ಯಂತ ಪ್ರತಿಷ್ಠಿತ ಸಿನಿಮಾ ಇದಾಗಿದೆ. ಸ್ವಾತಂತ್ರ್ಯ ಯೋಧ ಉಯ್ಯಾಲವಾಡ ನರಸಿಂಹರೆಡ್ಡಿ ಬಯೋಪಿಕ್ ಕುರಿತಾದ ಈ ಚಿತ್ರಕ್ಕೆ ಸುರೇಂದರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರವನ್ನು ಚಿರಂಜೀವಿ ಪುತ್ರ ರಾಮ್ ಚರಣ್ ನಿರ್ಮಿಸುತ್ತಿದ್ದಾರೆ. ನಯನತಾರಾ ನಾಯಕಿಯಾಗಿ ಅಭಿನಯಿಸುತ್ತಿದ್ದರೆ, ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಸುದೀಪ್, ತಮನ್ನಾ, ವಿಜಯ್ ಸೇತುಪತಿ, ಜಗಪತಿ ಬಾಬು ಮುಂತಾದವರಿದ್ದಾರೆ.

ಚಿರಂಜೀವಿ ಫಾರ್ಮ್ ಹೌಸ್ ನಲ್ಲಿ ಆಕಸ್ಮಿಕ ಬೆಂಕಿ: ಸೈರಾ ನರಸಿಂಹ ರೆಡ್ಡಿ ಶೂಟಿಂಗ್ ಸೆಟ್ ಬೆಂಕಿಗಾಹುತಿ

Fire at Chiranjeevi’s farmhouse, Sye Raa Narasimha Reddy sets damaged