ಹೊಸ ಹುಡುಗರ ತಂಡಕ್ಕಾಗಿ ಬಿ.ಜಯಶ್ರೀ ‘ಕೊರವಂಜಿ’ ವೇಷ !

Promotion

ಬೆಂಗಳೂರು, ಜೂನ್ 07, 2019 (www.justkannada.in): ನಿರ್ದೇಶಕ ಯಶಸ್ವಿ ಬಾಲಾದಿತ್ಯಾ ಹೊಸ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ಮೊದಲ ಚಿತ್ರವಾದರೂ ತಾವೇ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದರೆ ಹಿರಿಯ ನಟಿ, ರಂಗಕರ್ಮಿ ಬಿ.ಜಯಶ್ರೀ ಕೊರವಂಜಿ ಪಾತ್ರ ಮಾಡುತ್ತಿದ್ದಾರೆ.

ನಟನೆ ಜತೆಗೆ ಒಂದು ಹಾಡಿಗೆ ಕಂಠದಾನ ಮಾಡಿದ್ದಾರೆ. ಹೊಸಬರು. ಹೊಸ ರೀತಿಯಲ್ಲಿ ಮಾಡಿರುವ ಸಿನಿಮಾ. ಎಲ್ಲರ ಪಾತ್ರಗಳು ಚೆನ್ನಾಗಿವೆ. ನನಗೆ ತಕ್ಕಂತ ಪಾತ್ರವನ್ನು ನಿರ್ದೇಶಕರು ಇಲ್ಲಿ ಕೊಟ್ಟಿದ್ದಾರೆ’ ಬಿ ಜಯಶ್ರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.