ಮೈಸೂರಿನಲ್ಲಿ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಗೆ ಭರ್ಜರಿ ಸಿದ್ಧತೆ: ಕೇಕ್ ತಯಾರಿಗೆ ಚಾಲನೆ….

ಮೈಸೂರು,ನ,13,2019(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ‌ ಕ್ರಿಸ್ ಮಸ್ ಮತ್ತು ಹೊಸ ವರ್ಷ ಆಚರಣೆಗೆ ಭರ್ಜರಿ ಸಿದ್ದತೆ ನಡೆಸಲಾಗುತ್ತಿದ್ದು ಒಂದು ತಿಂಗಳು ಬಾಕಿ ಇರುವಾಗಲೇ ಕೇಕ್ ತಯಾರಿಕೆಗೆ ಚಾಲನೆ ಸಿಕ್ಕಿದೆ.

ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ವತಿಯಿಂದ  ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ನಡೆಯುತ್ತಿದ್ದು, ನಗರದ ಹೋಟೆಲ್ ಮಾಲಿಕರ ಸಂಘದ ಕಚೇರಿಯಲ್ಲಿ ಕೇಕ್ ಮಿಕ್ಸಿಂಗ್  ಕಾರ್ಯಕ್ಕೆ ಸಂಘದ ಅಧ್ಯಕ್ಷ ನಾರಾಯಣಗೌಡ ಚಾಲನೆ ನೀಡಿದರು.

ಒಟ್ಟು 1200 ಕೆ.ಜಿ ಕೇಕ್ ತಯಾರಿ ಮಾಡಲಾಗುತ್ತಿದ್ದು, ಕೇಕ್ ತಯಾರಿಕೆಯಲ್ಲಿ ಒಣದ್ರಾಕ್ಷಿ, ಗೋಡಂಬಿ, ರೆಡ್ ಚೆರ್ರಿ, ಆರೆಂಜ್ ಪೀಲ್ಸ್, ಕ್ಯಾಷಿವ್ ನಟ್, ಟ್ಯುಟಿ ಫ್ರೂಟಿ ಮತ್ತು ೨೦ ಬಾಟೆಲ್ ಆಲ್ಕೋಹಾಲಿಕ್ ರಹಿತ ವೈನ್, ಸೇರಿ ಹಲವು ಪದಾರ್ಥಗಳು ಬಳಕೆ ಮಾಡಲಾಗುತ್ತಿದೆ. ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಗೆ ಇನ್ನೂ ಒಂದು ತಿಂಗಳು ಬಾಕಿ ಇದ್ದು ಇದಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.

Key words: Christmas – New Year- Mysore- Preparing – Cake mixing