Saturday, September 19, 2026

BDA Apartments

ಚಾಕ್ಲೇಟ್ ಹಲ್ವಾ ಮಾಡುವುದು ಹೀಗೆ… BDA JK_Adv BDA Adv
Home Front Page ಚಾಕ್ಲೇಟ್ ಹಲ್ವಾ ಮಾಡುವುದು ಹೀಗೆ….

ಚಾಕ್ಲೇಟ್ ಹಲ್ವಾ ಮಾಡುವುದು ಹೀಗೆ….

ಬೇಕಾಗುವ ಪದಾರ್ಥಗಳು: 
1ಕಪ್- ಮಿಲ್ಕ್ ಪೌಡರ್, ಮುಕ್ಕಾಲು ಕಪ್- ಶುಗರ್, 50ಗ್ರಾಮ್ಸ್- ಬಟರ್, 2tea ಸ್ಪೂನ್- ಕೋ ಕೋ ಪೌಡರ್ ,ಕಾಲು ಕಪ್ ನೀರು.

ಮಾಡುವ ವಿಧಾನ
ಮೊದಲಿಗೆ ಮಿಲ್ಕ್ ಪೌಡರ್ ಹಾಗೂ ಕೋ ಕೋ ಪೌಡರ್ ಅನ್ನು ಜರಡಿ ಹಿಡಿದಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ನೀರು, ಸಕ್ಕರೆ ಹಾಕಿ. ಎಳೆ ಪಾಕ ಬಂದಾಗ ಬೆಣ್ಣೆ ಹಾಕಿ.

ಅದು ನೀರಾದ ಮೇಲೆ ಮಿಲ್ಕ್ ಪೌಡರ್ ಹಾಗೂ ಕೋ ಕೋ ಪೌಡರ್ ಹಾಕಿ ಚೆನ್ನಾಗಿ ಚಮಚದಿಂದ ಕೈ ಆಡಿಸಿ. ಈ ಮಿಶ್ರಣ ಸ್ವಲ್ಪ ಗಟ್ಟಿಯಾಗುವ ಹಂತ ತಲುಪಿದಾಗ ಒಂದು ತಟ್ಟೆ ಗೆ ಹಾಕಿ. ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕಟ್ ಮಾಡಿ. ಮೇಲೆ ಅಲಂಕರಿಸಲು. ಬಾದಾಮಿ, ಪಿಸ್ತಾ, ಗೋಡಂಬಿ ಉಪಯೋಗಿಸಬಹುದು.