ಕೃಷಿಭೂಮಿ ಲೀಸ್ ಗೆ ಕೊಡುವ ಮುನ್ನ ಎಚ್ಚರ: ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ವಶ…

ಚಿತ್ರದುರ್ಗ,ಅಕ್ಟೋಬರ್,8,2020(www.justkannada.in): ಕೃಷಿಭೂಮಿಯಲ್ಲಿ ಬೆಳೆಯಲಾಗಿದ್ದ 9 ಕೋಟಿ ಮೌಲ್ಯದ ಗಾಂಜಾವನ್ನ ಚಿತ್ರದುರ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.jk-logo-justkannada-logo

ಇಂದು ಚಿತ್ರದುರ್ಗದ ಹಲವೆಡೆ ಗಾಂಜಾ ಬೆಳೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ವಡೇರಹಳ್ಳಿ ಬಳಿ ರೈತನ 4 ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಗಾಂಜಾವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರುದ್ರೇಶ್ ಎಂಬಾತ ಕೃಷಿಜಮೀನಿನಲ್ಲಿ 9 ಕೋಟಿ ಮೌಲ್ಯದ  ಗಾಂಜಾ ಬೆಳೆದಿದ್ದನು ಎನ್ನಲಾಗಿದೆ. ರೈತರ  ಜಮೀನು ಖರೀದಿಸಿದ್ದ ಎ1 ರುದ್ರೇಶನನ್ನ ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.chitradurga- Marijuana- land-police-attack

ಇನ್ನೊಂದೆಡೆ ಹೊಳಲ್ಕೆರೆ ಬಳಿ 28 ಕೆಜಿ ಹಸಿ ಗಾಂಜಾವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಗಾಂಜಾ ಬೆಳೆದಿದ್ದ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

Key words: chitradurga- Marijuana- land-police-attack