Sunday, September 27, 2026

BDA Apartments

ಮೈಸೂರು: ಕ್ಯಾರಾವ್ಯಾನ್’ನಲ್ಲೇ ದಿನಕಳೆಯುತ್ತಿರುವ ಚೀನಾ ಪ್ರಜೆ ! BDA JK_Adv BDA Adv
Home Front Page ಮೈಸೂರು: ಕ್ಯಾರಾವ್ಯಾನ್’ನಲ್ಲೇ ದಿನಕಳೆಯುತ್ತಿರುವ ಚೀನಾ ಪ್ರಜೆ !

ಮೈಸೂರು: ಕ್ಯಾರಾವ್ಯಾನ್’ನಲ್ಲೇ ದಿನಕಳೆಯುತ್ತಿರುವ ಚೀನಾ ಪ್ರಜೆ !

ಮೈಸೂರು, ಮಾರ್ಚ್ 23, 2020 (www.justkannada.in): ಚೈನಾ ವ್ಯಕ್ತಿಯೊಬ್ಬ ಕಳೆದ 5 ದಿನಗಳಿಂದ ಮೈಸೂರಿನ ಒಂದೆ ಸ್ಥಳದಲ್ಲಿದ್ದು, ಆತಂಕ ಮೂಡಿಸಿದ್ದಾನೆ.

ಮೈಸೂರಿನ ಲಲಿತ ಮಹಲ್‌ ಮೈದಾನದಲ್ಲಿ ವಾಸ್ತವ್ಯ ಹೂಡಿದ್ದು, ಚೈನಾದಿಂದ ಪ್ರವಾಸಕ್ಕಾಗಿ ಮೈಸೂರಿಗೆ ಬಂದಿದ್ದಾನೆ. ತನ್ನದೆ ಕ್ಯಾರಾವ್ಯಾನ್‌ನಲ್ಲಿ ಪ್ರವಾಸಕ್ಕೆ ಬಂದಿರುವ ವ್ಯಕ್ತಿ. ನಗರದ ಒಳಗೆ ಇರದೆ ನಗರದ ಹೊರವಲಯದ ಮೈದಾನದಲ್ಲಿಯೇ ಉಳಿದಿದ್ದಾನೆ.

ಬ್ಯಾಟ್ರಿಕ್ ಎಂಬ ಚೈನಾ ದೇಶದ ಪ್ರಜೆ. 2019 ರಲ್ಲೆ ಕರ್ನಾಟಕ್ಕೆ ಬಂದಿರುವ ಬ್ಯಾಟ್ರಿಕ್. ಕಳೆದ ಮೂರು ತಿಂಗಳಿನಿಂದ ರಾಜ್ಯಾದ್ಯಂತ ಪ್ರವಾಸ ಮಾಡಿರುವ ಬ್ಯಾಟ್ರಿಕ್. ಇದೀಗ ಕಳೆದ 5 ದಿನದಿಂದ ಮೈಸೂರಿನ ಗಿರಿದರ್ಶಿನಿ ಬಡವಾಣೆ ಸಮೀಪದಲ್ಲಿ ಲಲಿತಮಹಲ್ ಮೈದಾನದಲ್ಲಿ ವಾಸ್ತವ್ಯ ಹೂಡಿದ್ದಾನೆ.

ನಗರದಲ್ಲಿ ಕೊರೋನಾ ಬಗ್ಗೆ ಆತಂಕ ಹೆಚ್ಚಾಗಿದೆ. ಜನರು ನನ್ನನ್ನ ಅನುಮಾನದಿಂದ ನೋಡ್ತಾರೆ. ಕೊರೋನಾ ಬರುವುದಕ್ಕು ಮುನ್ನ ನಾನು ಕರ್ನಾಟಕಕ್ಕೆ ಬಂದಿದ್ದೇನೆ. ಆದರೂ ನನ್ನಿಂದ ಸಮಸ್ಯೆಯಾಗಬಾರದು ಅನ್ನೊ ಕಾರಣಕ್ಕೆ ನಗರದಿಂದ ಹೊರಗೆ ಇದ್ದೇ‌ನೆ. ಅಗತ್ಯವಸ್ತು ಖರೀದಿಸಿ ಕ್ಯಾರಾವ್ಯಾನ್‌ನಲ್ಲೆ ಜೀವ ಮಾಡ್ತಿದ್ದೇನೆ ಎನ್ನುತ್ತಿರುವ ಬ್ಯಾಟ್ರಿಕ್. ಕೊರೋನಾ‌ ಭೀತಿ ನಡುವೆ ಗೊಂದಲ ಸೃಷ್ಟಿಸಿರುವ ಚೈನಾ ಪ್ರಜೆ.