ಮೈಸೂರು,ಸೆಪ್ಟಂಬರ್, 19,2025 (www.justkannada.in): ಮಕ್ಕಳ ದಸರಾ ರಜೆಯನ್ನು ಅರ್ಥಪೂರ್ಣವಾಗಿಸಲು ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ (Indian Institute of Educational Theatre) ವತಿಯಿಂದ “ಆನೆ ಬಂತು ಆನೆ” ಮಕ್ಕಳ ರಂಗಶಿಬಿರವನ್ನು ಆಯೋಜಿಸಲಾಗಿದೆ.
ಸೆಪ್ಟೆಂಬರ್ 20ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಈ ಶಿಬಿರವು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ (7 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ) ನಡೆಯಲಿದೆ. ಶಿಬಿರವನ್ನು ಹಿರಿಯ ರಂಗಭೂಮಿ ತಜ್ಞರು ಹಾಗೂ ಮಕ್ಕಳ ರಂಗಭೂಮಿಯಲ್ಲಿ ಅನುಭವಿಗಳಾದ ಸುಪ್ರೀತ್ ಭಾರದ್ವಾಜ್ ನೇತೃತ್ವ ವಹಿಸಲಿದ್ದಾರೆ. ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಹಾರ್ಡ್ವಿಕ್ ಶಾಲಾ ಆವರಣದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಈ ಶಿಬಿರ ನಡೆಯಲಿದೆ.
ದಸರಾ ಹಬ್ಬದ ರಜೆಯ ಸಂದರ್ಭದಲ್ಲಿ ಮಕ್ಕಳನ್ನು ಕೇವಲ ಮೊಬೈಲ್ ಬಳಕೆಯಲ್ಲಿ ನಿರತರಾಗುವುದರಿಂದ ದೂರವಿಟ್ಟು, ಸಂಗೀತ, ನೃತ್ಯ ಹಾಗೂ ನಾಟಕ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳಲು ಇದು ಉತ್ತಮ ಅವಕಾಶ. ರಂಗಶಿಬಿರದ ಮೂಲಕ ಮಕ್ಕಳು ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: 98456 05012 / 94488 71815
Key words: Dasara holiday, Mysore, children, Ranga shibira