ಮಂಡ್ಯ ಜಿಲ್ಲಾಸ್ಪತ್ರೆ ವಾರ್ಡ್ ಮುಂದೆಯೇ ಹೆರಿಗೆ: ಮಗು ಸಾವು: ಸಿಬ್ಬಂದಿ ವಿರುದ್ಧ ಕುಟುಂಬಸ್ಥರ ಆಕ್ರೋಶ…

ಮಂಡ್ಯ,ಮೇ,26,2021(www.justkannada.in): ಜಿಲ್ಲಾಸ್ಪತ್ರೆಯ  ವಾರ್ಡ್ ಮುಂದೆಯೇ ಹೆರಿಗೆಯಾಗಿ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.jk

ಹೆರಿಗೆ ನೋವು ಹಿನ್ನೆಲೆ ಗರ್ಭಿಣಿ ಮಹಿಳೆ ಸೋನು ಆಸ್ಪತ್ರೆಗೆ ಬಂದಿದ್ದರು. ಆದರೆ ಕೋವಿಡ್ ಟೆಸ್ಟ್ ವರದಿ ಇಲ್ಲದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ್ದಾರೆ. ಈನಡುವೆ 2 ಗಂಟೆಗಳ ಕಾಲ ಆಸ್ಪತ್ರೆಯ ವಾರ್ಡ್ ಮುಂದೆಯೇ ಗರ್ಭಿಣಿ ನರಳಾಡಿದ್ದು,  ನಂತರ ವಾರ್ಡ್ ಮುಂದೆಯೇ ಹೆರಿಗೆಯಾಗಿ , ಮಗು ಸಾವನ್ನಪ್ಪಿದೆ.

ಇನ್ನು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರು ಆಕ್ರೋಶ  ವ್ಯಕ್ತಪಡಿಸಿದ್ದಾರೆ.

Key words: Childbirth- Mandya District-hosptal-death – child-  Family -outrage -against -staff