ಯುಪಿಎಯಿಂದ ಲೂಟಿ: ಚೊಂಬನ್ನ ಪ್ರಧಾನಿ ಮೋದಿ ಅಕ್ಷಯ ಪಾತ್ರೆ ಮಾಡಿದ್ದಾರೆ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ.

ಚಿಕ್ಕಬಳ್ಳಾಪುರ,ಏಪ್ರಿಲ್,20,2024 (www.justkannada.in):  ಯುಪಿಎ ಅಧಿಕಾರದಲ್ಲಿದ್ದಾ ದೇಶವನ್ನ ಲೂಟಿ ಮಾಡಿ ನಂತರ ಪ್ರಧಾನಿ ಮೋದಿಗೆ  ಚೊಂಬು ಕೊಟ್ಟರು.  ಪ್ರಧಾನಿ ಮೋದಿ ಆ ಚೊಂಬನ್ನ ಈಗ ಅಕ್ಷಯ ಪಾತ್ರೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದರು.

ಚಿಕ್ಕಬಳ್ಳಾಪುರದ ಅಗಲಗುರ್ಕಿ  ಬಳಿ ನಡೆಯುತ್ತಿರುವ ಬಿಜೆಪಿ-ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ ದೇವೇಗೌಡರು, ರಾಜ್ಯಕ್ಕೆ ನಿಜವಾಗಿಯೂ ಚೊಂಬನ್ನ ಕೊಟ್ಟಿದ್ದು ಯಾರು ಯುಪಿಎ  ಅಧಿಕಾರದಲ್ಲಿದ್ದಾಗ ದೇಶವನ್ನ  ಲೂಟಿ ಮಾಡಿತ್ತು.  ಲೂಟಿ ಮಾಡಿದ್ದರಿಂದ ಚೊಂಬು ಖಾಲಿಯಾಗಿತ್ತು.  ಯುಪಿಎ ಸಂಪತ್ತು ಲೂಟಿ ಮಾಡಿ 2014ರಲ್ಲಿ ನರೇಂದ್ರ ಮೋದಿ ಅವರಿಗೆ ಚೊಂಬು ಕೊಟ್ಟಿದ್ದರು. ಪ್ರಧಾನಿ ಮೋದಿ ಚೊಂಬನ್ನ ಅಕ್ಷಯ ಪಾತ್ರೆ ಮಾಡಿದ್ದಾರೆ  ಎಂದರು.

ಡಿಸಿಎಂ ಡಿಕೆ  ಶಿವಕುಮಾರ್ ರಾಜ್ಯವನ್ನ ಲೂಟಿ ಮಾಡಿದ್ದಾರೆ ಮೋದಿ ಅಧಿಕಾರಕ್ಕೆ ಬಂದ ಮೇಲೆ  ಸಣ್ಣ ವರ್ಗದವರನ್ನೂ ಮೇಲಕ್ಕೆ ಎತ್ತಿದ್ದಾರೆ . ಆದರೆ ಚೊಂಬು ಜಾಹೀರಾತು ಕೊಟ್ಟ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಗೆ ನಾಚಿಕೆಯಾಗಬೇಕು’ ರಾಹುಲ್ ಭಾಷಣ ಬಗ್ಗೆ ವ್ಯಾಖ್ಯಾನ ಮಾಡಲು ಹೋಗಲ್ಲ ಎಂದರು.

ಕರ್ನಾಟಕದ 28 ಸ್ಥಾನಗಳನ್ನೂ ಎನ್ ಡಿಎ ಅಭ್ಯರ್ಥಿಗಳನ್ನ ಗೆಲ್ಲಿಸಬೇಕಿದೆ. ನೀವು ನನ್ನ ನಿಜವಾದ ಕಾರ್ಯಕರ್ತರು. 28 ಸ್ಥಾನಗಳನ್ನ ಗೆಲ್ಲಿಸಿದ್ರೆ  ನಮಗೆ ನೈತಿಕ ಶಕ್ತಿ ಬರುತ್ತದೆ.  ತಲೆಭಾಗಿ ಪ್ರಾರ್ಥಿಸುತ್ತೇನೆ ಎಂದು ಹೆಚ್.ಡಿದೇವೇಗೌಡರು ಹೇಳಿದರು.

Key words: Chikkaballapur, PM-Modi, HD Devegowda