ಮಾಜಿ ಸಚಿವ ಶಿವಶಂಕರ್ ರೆಡ್ಡಿ ವಿರುದ್ದ ಎಫ್ ಐ ಆರ್ ದಾಖಲು…

ಚಿಕ್ಕಬಳ್ಳಾಪುರ,ನ,10,2019(www.justkannada.in):  ನನ್ನ ಕ್ಷೇತ್ರದ ವಿಚಾರಕ್ಕೆ ಬಂದರೇ ಕೈ ಕತ್ತರಿಸುತ್ತೇನೆ ಎಂದು ಅನರ್ಹ ಶಾಸಕ ಡಾ.ಸುಧಾಕರ್ ಕುರಿತು ಹೇಳಿಕೆ ನೀಡಿದ್ದ ಮಾಜಿ ಸಚಿವ ಶಿವಶಂಕರ್ ರೆಡ್ಡಿ ವಿರುದ್ದ ಇದೀಗ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಮಂಚೇನಹಳ್ಳಿ ತಾಲೂಕು ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 19ರಂದು ಕಾರ್ಯಕರ್ತರ ಸಭೆಯಲ್ಲಿ ನನ್ನ ಕ್ಷೇತ್ರದ ತಂಟೆಗೆ ಬಂದರೇ  ಕೈ ಕತ್ತರಿಸುತ್ತೇನೆ ಎಂದು ಅನರ್ಹ ಶಾಸಕ ಡಾ.ಸುಧಾಕರ್ ವಿರುದ್ದ  ಕಾಂಗ್ರೆಸ್ ಶಾಸಕ ಶಿವಶಂಕರರೆಡ್ಡಿ ಹೇಳಿಕೆ ನೀಡಿದ್ದರು. ಈ ಸಂಬಂಧ ಸುಧಾಕರ್ ಬೆಂಬಲಿಗ ರವಿಚಂದ್ರಕುಮಾರ್ ಕೋರ್ಟ್ ಮೆಟ್ಟೀಲೇರಿದ್ದರು.

ಶಾಸಕ ಶಿವಶಂಕರ್ ರೆಡ್ಡಿ ವಿರುದ್ದ ಪ್ರಕರಣ ದಾಖಲಿಸುವಂತೆ ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿಸಿವಿಲ್ ಕೋರ್ಟ್ ಡಿವೈಎಸ್ ಪಿ ರವಿಶಂಕರ್ ಗೆ ಆದೇಶ ನೀಡಿತ್ತು.  ಈ ಸಂಬಂಧ ಇದೀಗ ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ವಿರುದ್ದ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Key words: chikkaballapur- FIR- file- against- former minister -Shivashankar Reddy