Saturday, August 15, 2026

BDA Apartments

Home Front Page ನನ್ನ ಗೆಲುವು ಗೋಡೆ ಮೇಲೆ ಬರೆದಷ್ಟು ನಿಶ್ಚಿತ-ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ವಿಶ್ವಾಸ…..

ನನ್ನ ಗೆಲುವು ಗೋಡೆ ಮೇಲೆ ಬರೆದಷ್ಟು ನಿಶ್ಚಿತ-ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ವಿಶ್ವಾಸ…..

ಚಿಕ್ಕಬಳ್ಳಾಪುರ,ಡಿ,3,2019(www.justkannada.in): ನನ್ನ ಗೆಲುವು ಗೋಡೆ ಮೇಲೆ ಬರೆದಷ್ಟು ನಿಶ್ಚಿತ ಎಂದು ಚಿಕ್ಕಬಳ್ಳಾಪುರ ಅಭ್ಯರ್ಥಿ ಡಾ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳಲ್ಲಿ ಮಾತನಾಡಿದ ಸುಧಾಕರ್, ಜನರು ನನ್ನನ್ನ ಬೆಂಬಲಿಸುವ ವಿಶ್ವಾಸವಿದೆ. ಬಿಜೆಪಿ ಕನಿಷ್ಟ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಮೂರು ಕ್ಷೇತ್ರದಲ್ಲೂ ಬಿಜೆಪಿ ಗೆದ್ದರೇ ಆಶ್ಚರ್ಯವಿಲ್ಲ. ನನ್ನ ಗೆಲುವು ಗೋಡೆ ಮೇಲೆ ಬರೆದಷ್ಟು ನಿಶ್ಚಿತ ಎಂದರು.

ಜೆಡಿಎಸ್- ಕಾಂಗ್ರೆಸ್ ಮತ್ತೆ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸುಧಾಕರ್, ಅಧಿಕಾರಕ್ಕಾಗಿ ಯಾವಾಗಬೇಕಾದರೂ ಅವರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.  ಆದ್ರೆ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ.  ಕಾಂಗ್ರೆಸ್ ಜೆಡಿಎಸ್ ಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಸುಧಾಕರ್ ಕಿಡಿಕಾರಿದರು.

Key words: chikkabalapur- BJP candidate- Dr Sudhakar  -win-confident