ಮಂಡ್ಯ, ಮೇ.೦೧,೨೦೨೫: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಜಿಲ್ಲೆಯ ಪ್ರವಾಸಕೈಗೊಳ್ಳುವರು.
ನಾಳೆ ಬೆಳಿಗ್ಗೆ 11:10 ಕ್ಕೆ ಹೆಲಿಕಾಪ್ಟರ್ ಮೂಲಕ ಕಸಬಾ ಹೋಬಳಿಯ ತೂಬಿನಕೆರೆ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. ಬಳಿಕ ಬೆಳಿಗ್ಗೆ 11:15 ಗಂಟೆಗೆ ತೂಬಿನಕೆರೆ ಹೆಲಿಪ್ಯಾಡ್ ನಿಂದ ರಸ್ತೆ ಮೂಲಕ ಸಂಚರಿಸಲಿದ್ದಾರೆ.
ಬೆಳಿಗ್ಗೆ 11:25 ಗಂಟೆಗೆ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಹೋಬಳಿಯ ಅಲ್ಲಾಪಟ್ಟಣ ಗ್ರಾಮದಲ್ಲಿ ಶ್ರೀ ಅನ್ನದಾನೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ (ರಿ.), ಹೆಬ್ಬಾಡಿಹುಂಡಿ ಮತ್ತು ಅಲ್ಲಾಪಟ್ಟಣ ಗ್ರಾಮಸ್ಥರುಗಳ ವತಿಯಿಂದ ಆಯೋಜಿಸಿರುವ ಶ್ರೀ ಅನ್ನದಾನೇಶ್ವರಸ್ವಾಮಿ ದೇವಸ್ಥಾನ ಪುನರ್ ನಿರ್ಮಾಣ, ವಿಗ್ರಹಗಳ ಸ್ಥಾಪನೆ ಮತ್ತು ಗೋಪುರ ಕುಂಭಾಭಿಷೇಕ ಹಾಗೂ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3:00 ಗಂಟೆಗೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮತ್ತು ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 4:40 ಗಂಟೆಗೆ ರಸ್ತೆ ಮೂಲಕ ಕಸಬಾ ಹೋಬಳಿ ತೂಬಿನಕೆರೆ ಹೆಲಿಪ್ಯಾಡ್ ತಲುಪರಿದ್ದಾರೆ.
ಸಂಜೆ 04.45 ಗಂಟೆಗೆ ಹೆಲಿಕಾಪ್ಟರ್ ಮೂಲಕ ಹೊರಟು 5:25 ಗಂಟೆಗೆ ಬೆಂಗಳೂರಿನ ಹೆಚ್.ಎ.ಎಲ್. ವಿಮಾನ ನಿಲ್ದಾಣ ತಲುಪರಿದ್ದಾರೆ ಎಂದು ಮುಖ್ಯ ಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ವಿಶೇಷ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
key words: Chief Minister Siddaramaiah, Mandya, Karnataka, Bangalore
Chief Minister Siddaramaiah will visit Mandya district tomorrow (May 2).