Sunday, September 20, 2026

BDA Apartments

ಆರ್.ಸಿಬಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸಿದ ಚೆನ್ನೈ...
Home Front Page ಆರ್.ಸಿಬಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸಿದ ಚೆನ್ನೈ ಸೂಪರ್ ಕಿಂಗ್ಸ್

ಆರ್.ಸಿಬಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸಿದ ಚೆನ್ನೈ ಸೂಪರ್ ಕಿಂಗ್ಸ್

ಬೆಂಗಳೂರು, ಸೆಪ್ಟೆಂಬರ್ 25, 2021 (www.justkannda.in): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸಿಎಎಸ್​ಕೆ ತಂಡ 6 ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ಈ ಮೂಲಕ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಆರ್​ಸಿಬಿ ತಂಡ ಗೆಲ್ಲಲು ಒಡ್ಡಿದ 157 ರನ್ ಗುರಿಯನ್ನು ಇನ್ನೂ ಹಲವು ಎಸೆತಗಳು ಬಾಕಿ ಇರುವಂತೆ ಗೆಲುವು ಸಾಧಿಸಿತು. ಈ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿತು.

ಚಿಕ್ಕ ಬೌಂಡರಿ ಇರುವ ಶಾರ್ಜಾ ಮೈದಾನದಲ್ಲಿ ಆರ್​ಸಿಬಿ ಒಡ್ಡಿದ ಸವಾಲು ಸಿಎಸ್​ಕೆ ದೊಡ್ಡದಾಗಿರಲಿಲ್ಲ. ಎಲ್ಲಾ ಬ್ಯಾಟರ್​ಗಳು ತಂಡದ ಗೆಲುವಿನಲ್ಲಿ ಕೊಡುಗೆ ನೀಡಿದರು.

ಮೊದಲಿಗೆ ಆರ್​ಸಿಬಿ ಮತ್ತು ಸಿಎಎಸ್​ಕೆ ಪಂದ್ಯ ಆರಂಭಕ್ಕೆ ಮರಳು ಬಿರುಗಾಳಿ ಸ್ವಲ್ಪ ಹೊತ್ತು ವಿಳಂಬಗೊಳಿಸಿತು. ನಂತರ ಸಿಎಸ್​ಕೆ ಕ್ಯಾಪ್ಟನ್ ಎಂ ಎಸ್ ಧೋನಿ ಟಾಸ್ ಗೆದ್ದು ಆರ್​ಸಿಬಿಗೆ ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದ್ದರು.

key words: Chennai Super Kings won against RCB and topped the list