ಜಿಲ್ಲಾಧಿಕಾರಿಯಿಂದ ಮತಪೆಟ್ಟಿಗೆಗಳ ಪರಿಶೀಲನೆ…!

ಮೈಸೂರು,ಡಿಸೆಂಬರ್,26,2020(www.justkannada.in) :  ಮೊದಲನೆ ಹಂತದ ಗ್ರಾಮ ಪಂಚಾಯತಿ ಚುನಾವಣಾಯು ಯಶಸ್ವಿಯಾಗಿ ಮುಗಿದ ಹಿನ್ನೆಲೆಯಲ್ಲಿ, ಭಾನುವಾರ ನಡೆಯಲಿರುವ ಎರಡನೇ ಹಂತದ ಚುನಾವಣಾ ಸಿದ್ಧತೆಯನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರಿಶೀಲನೆ ನಡೆಸಿದರು.Teachers,solve,problems,Government,bound,Minister,R.Ashokನಂತರ ಮಾತನಾಡಿದ ಅವರು, ಮೈಸೂರು ಉಪವಿಭಾಗದ ಟಿ.ನರಸೀಪುರ, ನಂಜನಗೂಡು, ಮೈಸೂರು ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯತಿಯ 2ನೇ ಹಂತದ ಚುನಾವಣೆ ನಡೆಯಲಿದೆ ಎಂದರು.

ಒಂದೊಂದು ಪೊಲೀಂಗ್ ಸ್ಟೇಷನ್ ಗಳಿಗೂ 4 ಜನ ಅಧಿಕಾರಿಗಳು ಇದ್ದು, ಇಂದು ಅವರು ಬ್ಯಾಲೆಟ್ ಪೇಪರ್ ಹಾಗೂ ಮತದಾರರ ಪಟ್ಟಿ ಸರಿ ಇದೆಯಾ ಎಂದು ಪರಿಶೀಲಿಸಿ ಮತ ಕೇಂದ್ರಗಳಿಗೆ ಕೊಂಡೊಯ್ಯುತ್ತಾರೆ ಎಂದು ಹೇಳಿದರು.

Checking-ballot-boxes-District-Collector 

ಇದೇ ಸಂದರ್ಭದಲ್ಲಿ ಎ.ಸಿ.ವೆಂಕಟರಾಜು, ತಹಶೀಲ್ದಾರ್ ರಕ್ಷಿತ್, ತಾಲೂಕು ನೊಡಲ್ ಅಧಿಕಾರಿ ಸೋಮಶೇಖರ್, ಇ.ಓ.ಕೃಷ್ಣಕುಮಾರ್, ಬಿ.ಇ.ಒ.ಕೃಷ್ಣ, ಟಿ.ಹೆಚ್.ಒ.ಮಹದೇವ ಪ್ರಸಾದ್ ಸೇರಿದಂತೆ ಇತರರು ಹಾಜರಿದ್ದರು.

key words : Checking-ballot-boxes-District-Collector