Thursday, September 17, 2026

BDA Apartments

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಲಕ್ಷ ರೂ.ಗೂ ಅಧಿಕ ಹಣ ವಶಕ್ಕೆ BDA JK_Adv BDA Adv
Home Front Page ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಲಕ್ಷ ರೂ.ಗೂ ಅಧಿಕ ಹಣ ವಶಕ್ಕೆ.

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಲಕ್ಷ ರೂ.ಗೂ ಅಧಿಕ ಹಣ ವಶಕ್ಕೆ.

ಚಾಮರಾಜನಗರ,ಮಾರ್ಚ್,29,2024 (www.justkannada.in): ದಾಖಲೆ ಇಲ್ಲದೆ ಸಾಗಾಣೆ ಮಾಡುತ್ತಿದ್ದ 4 ಲಕ್ಷಕ್ಕೂ ಅಧಿಕ ನಗದನ್ನು ಪೊಲೀಸರು  ವಶಕ್ಕೆ ಪಡೆದಿದದ್ದಾರೆ.

ಗುಂಡ್ಲುಪೇಟೆ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ ನೇತೃತ್ವದಲ್ಲಿ ಪೊಲೀಸರು  ಕೆಕ್ಕನಹಳ್ಳ ಮತ್ತು ಮದ್ದೂರು ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿ ಹಣ ವಶಕ್ಕೆ ಪಡೆದಿದ್ದಾರೆ.ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಲಕ್ಷ ರೂ.ಗೂ ಅಧಿಕ ಹಣ ವಶಕ್ಕೆ sie

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪೀಯ ಕೆಕ್ಕನಹಳ್ಳ  ಮದ್ದೂರು ವಲಯದ ಕೇರಳ ಸುಲ್ತಾನ್ ಭತ್ತೇರಿ ರಸ್ತೆಯ ಮದ್ದೂರು ಚೆಕ್ ಪೋಸ್ಟ್ ನಲ್ಲಿ  ವಶಕ್ಕೆ ಪಡೆಯಲಾಗಿದೆ.  ಕೇರಳದಿಂದ ದಾಖಲೆಯಿಲ್ಲದೆ 4 ಲಕ್ಷಕ್ಕೂ ಹೆಚ್ಚಿನ ಹಣವನ್ನು ಸಾಗಾಣೆ ಮಾಡುತ್ತಿದ್ದರು ಎನ್ನಲಾಗಿದೆ.  ಲೋಕಸಭಾ ಚುನಾವಣೆ ಹಿನ್ನೆಲೆ, ಚೆಕ್ ಪೋಸ್ಟ್ ಗಳಲ್ಲಿ ಬಿಗಿ ತಪಾಸಣೆ ಕೈಗೊಳ್ಳಲಾಗಿದೆ.

Key words: Check Post, money, seized