ಏಪ್ರಿಲ್ 1ರಿಂದ ಸರಕಾರಿ ನೌಕರರ ಕೆಲಸದ ಸಮಯ, ವೇತನದಲ್ಲಿ ಬದಲಾವಣೆ ಸಾಧ್ಯತೆ

ಬೆಂಗಳೂರು, ಮಾರ್ಚ್ 28, 2021 (www.justkannada.in): ಏಪ್ರಿಲ್ 1ರಿಂದ ನೌಕರರ ಕೆಲಸದ ಸಮಯ ಮತ್ತು ಅವರ ಸಂಬಳದ ರಚನೆಯಲ್ಲಿನ ಬದಲಾವಣೆಯಾಗುವ ಸಾಧ್ಯತೆ ಇದೆ.

ಪ್ರಸ್ತುತ 9 ಗಂಟೆಗಳಿಂದ ಕೆಲಸದ ಸಮಯವನ್ನು 12 ಗಂಟೆಗಳವರೆಗೆ ಹೆಚ್ಚಿಸಲು ಸರ್ಕಾರ ಯೋಜಿಸುತ್ತಿದೆ. ಕೆಲಸದ ಸಮಯ ಹೆಚ್ಚಳದೊಂದಿಗೆ, ಕೆಲಸದ ದಿನಗಳ ಸಂಖ್ಯೆಯನ್ನು ವಾರದಲ್ಲಿ ನಾಲ್ಕು ದಿನಕ್ಕೆ ಇಳಿಸುವ ಸಾಧ್ಯತೆಯಿದೆ.

ಏಪ್ರಿಲ್ 1 ರಿಂದ ಗ್ರ್ಯಾಚುಟಿ ಮತ್ತು ಭವಿಷ್ಯ ನಿಧಿಯಲ್ಲಿನ ಹೆಚ್ಚಳ ಮತ್ತು ಟೇಕ್-ಹೋಮ್ ಸಂಬಳದಲ್ಲಿನ ಇಳಿಕೆಯೊಂದಿಗೆ ನೌಕರರ ವೇತನ ರಚನೆಯಲ್ಲಿ ಬದಲಾವಣೆಯಾಗಲಿದೆ.

2020 ರಲ್ಲಿ ಸರ್ಕಾರ ಮೂರು ವೇತನ ಸಂಹಿತೆ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿದ್ದರಿಂದ ಇದು ಜಾರಿಗೆ ಬರಲಿದೆ. ಈ ಮೂರು ಕಾನೂನುಗಳನ್ನು ಈಗ ಏಪ್ರಿಲ್ 1, 2021 ರಿಂದ ಜಾರಿಗೆ ತರಬಹುದು.