Tuesday, August 18, 2026

BDA Apartments

Home Election 2024 ಎಂಪಿ ಚುನಾವಣೆ ಬಳಿಕ ರಾಜ್ಯದಲ್ಲಿ ಬದಲಾವಣೆ: ಮೈತ್ರಿಯಿಂದ ಜೆಡಿಎಸ್ ದೂರ- ಡಿಸಿಎಂ ಡಿಕೆ ಶಿವಕುಮಾರ್.

ಎಂಪಿ ಚುನಾವಣೆ ಬಳಿಕ ರಾಜ್ಯದಲ್ಲಿ ಬದಲಾವಣೆ: ಮೈತ್ರಿಯಿಂದ ಜೆಡಿಎಸ್ ದೂರ- ಡಿಸಿಎಂ ಡಿಕೆ ಶಿವಕುಮಾರ್.

ಕಲ್ಬುರ್ಗಿ,ಏಪ್ರಿಲ್,12,2024 (www.justkannada.in): ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಬದಲಾವಣೆಯಾಗಲಿದೆ. ಮೈತ್ರಿಯಿಂದ ಜೆಡಿಎಸ್ ದೂರವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಭವಿಷ್ಯ ನುಡಿದರು.

ಇಂದು ಕಲ್ಬುರ್ಗಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಎಂಪಿ ಚುನಾವಣೆ ಬಳಿಕ ರಾಜ್ಯದಲ್ಲಿ ಬದಲಾವಣೆಯಾಗಲಿದೆ. ಚುನಾವಣೆ ಬಳಿಕ ಮೈತ್ರಿಯಿಂದ ಜೆಡಿಎಸ್ ದೂರ ಇರುತ್ತೆ ಇಲ್ಲ ಅಂದರೆ  ಬಿಜೆಪಿ  ಜೊತೆ ಜೆಡಿಎಸ್ ವಿಲೀನವಾಗುತ್ತೆ. ಅವರ ಪಕ್ಷದ ಬದಲಾವಣೆ ಬಗ್ಗೆ  ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ ಕುಮಾರಸ್ವಾಮಿ ಹೇಳಿರುವವುದು ಸತ್ಯ ಎಂದರು.

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಬಂಧನ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಎನ್ ಐಎ ಅಧಿಕಾರಿಗಳು  ಅವರ ಕೆಲಸ ಮಾಡಿದ್ದಾರೆ ಸಂಫೂರ್ಣ ಸ್ವಾತಂತ್ರ ಎನ್ ಐಎಗೆ ನೀಡಿದ್ದೇವೆ.  ತಪ್ಪಿತಸ್ಥರ ವಿರುದ್ದ ಕ್ರಮವಾಗಲಿ ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಲಿ ಎಂದರು.

Key words: Change -state -after –MP- elections– DCM -DK Shivakumar.