ಚಂದ್ರಯಾನ-2 ಯೋಜನೆಗೆ ಭರದ ಸಿದ್ದತೆ: ಈ ಬಾರಿ 14 ಪೇಲೋಡ್‌ ಒಯ್ಯಲಿದೆ ಉಪಗ್ರಹ

ಬೆಂಗಳೂರು:ಮೇ-16:(www.justkannada.in) ಭಾರತೀಯ ಬಾಹ್ಯಾಕಾಶ ಸಂಶೋಧಾನ ಸಂಸ್ಥೆ ಇಸ್ರೋ ಚಂದ್ರಯಾನ-2 ಯೋಜನೆಗೆ ಭರದ ಸಿದ್ದತೆ ನಡೆಸಿದ್ದು, ಜುಲೈ 9ರಿಂದ ಜುಲೈ 16 ಅವಧಿಯಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆ ನಡೆಯಲಿದೆ. ಚಂದ್ರಯಾನ 2ರಲ್ಲಿ ಈ ಬಾರಿ ಒಟ್ಟು 14 ಪೇಲೋಡ್‌ಗಳಿರುತ್ತವೆ.

ಈ ಕುರಿತು ಮಾಹಿತಿ ನೀಡಿರುವ ಇಸ್ರೋ, ಜುಲೈ 9ರಿಂದ ಜುಲೈ 16 ಅವಧಿಯಲ್ಲಿ ಚಂದ್ರಯಾನ-2 ಉಡಾವಣೆ ನಡೆಯಲಿದ್ದು, ಸೆಪ್ಟೆಂಬರ್‌ 6ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. 14 ಪೇಲೋಡ್ ಗಳು ಇರಲಿದ್ದು, ಅದರಲ್ಲಿ 13 ಪೇಲೋಡ್‌ಗಳು ಭಾರತದಲ್ಲೇ ನಿರ್ಮಾಣವಾಗಿದ್ದು, ಒಂದು ಪೇಲೋಡ್‌ ಅನ್ನು ಮಾತ್ರ ನಾಸಾ ಅಭಿವೃದ್ಧಿಪಡಿಸಿದೆ ಎಂದಿದೆ.

ಆರ್ಬಿಟರ್‌ಗೆ 8, ಲ್ಯಾಂಡರ್‌ಗೆ 3 ಹಾಗೂ ರೋವರ್‌ಗ 2 ಪೇಲೋಡ್‌ಗಳನ್ನು ಅಳವಡಿಸಲಾಗಿರುತ್ತದೆ. ಚಂದ್ರನ ಮೇಲ್ಮೆ„ಯಿಂದ 100 ಕಿ.ಮೀ ದೂರದಲ್ಲಿ ಆರ್ಬಿಟರ್‌ ಪ್ರದಕ್ಷಿಣೆ ಹಾಕಲಿದ್ದು, ವಿಕ್ರಮ್‌ ಹೆಸರಿನ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದ ಬಳಿ ನಿಧಾನಗತಿಯಲ್ಲಿ ಇಳಿಯಲಿದೆ. ಇನ್ನು ಪ್ರಜ್ಞಾನ್‌ ಎಂಬ ಹೆಸರಿನ ರೋವರ್‌ ಅನ್ನು ಖರಗ್‌ಪುರ ಐಐಟಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ಚಂದ್ರನ ಮೈಮೇಲೆ ವಿವಿಧ ಪ್ರಯೋಗಗಳನ್ನು ನಡೆಸಲು ನೆರವಾಗಲಿದೆ. ಲ್ಯಾಂಡರ್‌ ಹಾಗೂ ರೋವರ್‌ಗೆ ವಿವಿಧ ಪ್ರಯೋಗಗಳನ್ನು ಮಾಡುವುದಕ್ಕಾಗಿ ಹಲವು ಪರಿಕರಗಳನ್ನು ಅಳವಡಿಸಲಾಗುತ್ತದೆ. ಇದೇ ಮೊದಲ ಬಾರಿಗೆ ನಾವು ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಡುತ್ತಿದ್ದೇವೆ.

ಇಸ್ರೋ ಅಭಿವೃದ್ಧಿಪಡಿಸಿರುವ ಪೇಲೋಡ್‌ ಲೇಸರ್‌ ರಿಫ್ಲೆಕ್ಟರ್‌ಗಳನ್ನು ಹೊಂದಿರಲಿದ್ದು, ಇವು ಚಂದ್ರನಿಗೆ ಇರುವ ದೂರವನ್ನು ಅಳೆಯಲು ಹಾಗೂ ಚಂದ್ರನ ಮೇಲ್ಮೆ„ ಮೇಲೆ ಲ್ಯಾಂಡರ್‌ನ ನಿಖರ ಸ್ಥಳವನ್ನು ಗುರುತಿಸಲು ನೆರವಾಗಲಿದೆ.

ಚಂದ್ರಯಾನ-2 ಯೋಜನೆಗೆ ಭರದ ಸಿದ್ದತೆ: ಈ ಬಾರಿ 14 ಪೇಲೋಡ್‌ ಒಯ್ಯಲಿದೆ ಉಪಗ್ರಹ
Chandrayaan-2 will carry 13 payloads: ISRO

India’s second Moon mission that is planned for a July launch will have 13 payloads and one passive experiment from American space agency NASA, the Indian Space Research Organisation (ISRO) .