ಚಂದನ್ ಶೆಟ್ಟಿ ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು: ಡೈವರ್ಸ್ ಗೆ ಅರ್ಜಿ ಸಲ್ಲಿಕೆ.

ಬೆಂಗಳೂರು,ಜೂನ್,7,2024 (www.justkannada.in): ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು ವಿಚ್ಛೇದನ ಕೋರಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪರಸ್ಪರ ಒಪ್ಪಿಗೆ ಮೇರೆಗೆ ಕಿರುತೆರೆ ದಂಪತಿ  ಚಂದನ್ ಶೆಟ್ಟಿ ನಿವೇದಿತಾ ಗೌಡ  ವಿಚ್ಛೇದನ ಕೋರಿ ಬೆಂಗಳೂರಿನ ಫ್ಯಾಮಿಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್ ಶೋನಲ್ಲಿ ಖ್ಯಾತರಾಗಿದ್ದ ಚಂದನ್ ಶೆಟ್ಟಿ, ನಿವೇದಿತಾ ಗೌಡ ನಡುವೆ ಪ್ರೀತಿ ಉಂಟಾಗಿತ್ತು. ನಂತರ  2020 ಫೆಬ್ರವರಿ 26 ರಂದು  ಇಬ್ಬರು ವಿವಾಹವಾಗಿದ್ದರು. ಇದೀಗ ಅವರ ದಾಂಪತ್ಯದಲ್ಲಿ ಬಿರುಕುಂಟಾಗಿದೆ ಎನ್ನಲಾಗಿದೆ.

Key words: chandan shetty, Nivedita gowda, diverce