ಮೈಸೂರು,ಜುಲೈ,17,2026 (www.justkannada.in): ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಸಂಭ್ರಮವಾಗಿದ್ದು, ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ದೇವಸ್ಥಾನಕ್ಕೆ ಬಂದರೂ ದೇವರ ದರ್ಶನ ಪಡೆದಿಲ್ಲ.
ಹೌದು ನಿಯಮ ಪಾಲನೆಗಾಗಿ ಸಚಿವ ಯತೀಂದ್ರ ಸಿದ್ದರಾಮಯ್ಯ ದೇವರ ದರ್ಶನವನ್ನು ಪಡೆದಿಲ್ಲ. ಬೆಳಿಗ್ಗೆ 10 ಒಳಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಅವಧಿ ಮೀರಿ ದೇವಸ್ಥಾನಕ್ಕೆ ಬಂದ ಕಾರಣಕ್ಕೆ ಯತೀಂದ್ರ ಸಿದ್ದರಾಮಯ್ಯ ಅವರು ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿಲ್ಲ.
ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ನಾವೇ ನಿಯಮ ಮಾಡಿ ಅದನ್ನ ಉಲ್ಲಘನೆ ಮಾಡೋದು ಸರಿಯಲ್ಲ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿತ್ತು. ಆದ ಕಾರಣ ದರ್ಶನ ಮಾಡಲಿಲ್ಲ. ಬೇರೆ ಗಣ್ಯರಿಗೂ ಈ ಮೂಲಕ ಮನವಿ ಮಾಡುವೆ. ಶುಕ್ರವಾರ, ಶನಿವಾರ, ಭಾನುವಾರ ಬೆಳಿಗ್ಗೆ 10ಗಂಟೆ ಒಳಗೆ ಬನ್ನಿ. ಇದರಿಂದ ಜನ ಸಾಮಾನ್ಯರಿಗೂ ಒಳ್ಳೆಯದಾಗುತ್ತದೆ ಎಂದಿದ್ದಾರೆ.
ನಾನು ಪಾಲಿಸಿದ್ದೇನೆ. ಎಲ್ಲರೂ ಕೂಡ ಪಾಲಿಸಬೇಕು..
ನಾನು ಚಾಮುಂಡಿ ಬೆಟ್ಟಕ್ಕೆ 10 ಗಂಟೆಗೆ ನಾನು ಬಂದೆ. ವಿಐಪಿ ಸಮಯ ಮುಗಿದ ಕಾರಣಕ್ಕೆ ದರ್ಶನ ಮಾಡಿಲ್ಲ. ನನ್ನ ಜೊತೆ ಬಂದವರು ಕೂಡ ದರ್ಶನ ಮಾಡಿಲ್ಲ. ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಬೆಳಿಗ್ಗೆ 10 ಗಂಟೆ ಮೇಲೆ ಯಾವ ವಿಐಪಿ ಪ್ರವೇಶ ಇಲ್ಲ. ಇದನ್ನು ನಾನು ಪಾಲಿಸಿದ್ದೇನೆ. ಎಲ್ಲರೂ ಕೂಡ ಪಾಲಿಸಬೇಕು ಎಂದು ಮನವಿ ಮಾಡಿದರು.
ಪಾರ್ಕಿಂಗ್ ಸ್ಥಳದಿಂದ ಚಾಮುಂಡಿ ಬೆಟ್ಟದ ತನಕ ಪರಿಶೀಲನೆ ಮಾಡಿದ್ದೇನೆ. ಭಕ್ತರನ್ನು ಭೇಟಿ ಮಾಡಿದ್ದೇನೆ. ಧರ್ಮ ದರ್ಶನದಲ್ಲಿ ಕೂಡ 2 ಗಂಟೆಗೆ ದರ್ಶನ ಆಗುತ್ತಿದೆ. ಯಾವುದೇ ಸಮಸ್ಯೆ ಇಲ್ಲ ಎಂದರು.
ಬಸ್ಸಿನಲ್ಲಿ ಬಂದ ಸಚಿವ ಯತೀಂದ್ರ ಸಿದ್ದರಾಮಯ್ಯ
ಚಾಮುಂಡಿ ಬೆಟ್ಟಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಬಸ್ಸಿನಲ್ಲಿ ಬಂದರು. 2 ಸಾವಿರ ಟಿಕೆಟ್ ಖರೀದಿಸಿ ಬರುವವರಿಗೆ ವಿಶೇಷ ಎಸಿ ಬಸ್ ವ್ಯವಸ್ಥೆ ಮಾಡಲಾಗಿದ್ದು , ಜನರೊಂದಿಗೆ ಅದೇ ಬಸ್ಸಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ಸಚಿವರಿಗೆ ಕಾಂಗ್ರೆಸ್ ನಾಯಕರು ಸಾಥ್ ನೀಡಿದರು.
Key words: Visit, Chamundi Hills, Minister, Yathindra Siddaramaiah






