ಚಾಮುಂಡಿ ಬೆಟ್ಟ ಪ್ರವೇಶ ವಿಚಾರ:  ಇಂದು ಸಂಜೆ ವೇಳೆಗೆ ಸೂಕ್ತ ಸಮಯ ನಿಗದಿ- ಸಚಿವ ಎಸ್.ಟಿ ಸೋಮಶೇಖರ್…

ಮೈಸೂರು,ಅಕ್ಟೋಬರ್,17,2020(www.justkannada.in): ಚಾಮುಂಡಿ ಬೆಟ್ಟ ಹೊರತು ಪಡಿಸಿದರೆ ಉಳಿದೆಲ್ಲಾ ಪ್ರವಾಸಿ ತಾಣಗಳ ಮೇಲಿನ ನಿರ್ಬಂಧವನ್ನು ಹಿಂಪಡೆಯಲಾಗಿದೆ. ಇಂದು ಸಂಜೆ ವೇಳೆಗೆ ಚಾಮುಂಡಿ ಬೆಟ್ಟದ ಪ್ರವೇಶ ವಿಚಾರದಲ್ಲಿ ಸೂಕ್ತವಾದ ಸಮಯ ನಿಗದಿ ಮಾಡುತ್ತೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.jk-logo-justkannada-logo

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಇಂದು ಸಂಜೆಯ ವೇಳೆಗೆ ಚಾಮುಂಡಿ ಬೆಟ್ಟದ ಪ್ರವೇಶ ವಿಚಾರದಲ್ಲಿ ಸೂಕ್ತವಾದ ಸಮಯ ನಿಗದಿ ಮಾಡುತ್ತೇವೆ. ನಾಳೆ ದೇವಸ್ಥಾನವನ್ನು ತೆರಯಬೇಕೋ ಬೇಡವೋ ಎಂಬ ವಿಚಾರವನ್ನು ಸಹ ಇಂದು ಸಂಜೆ ತೀರ್ಮಾನ ಮಾಡುತ್ತೇವೆ. ಇಂದು ಸಂಜೆಯ ವೇಳೆಗೆ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಈ ವಿಚಾರದಲ್ಲಿ ನಾವು ಯಾರ ಒತ್ತಡಕ್ಕೂ ಮಣಿದು ನಿರ್ಬಂಧ ತೆರವು ಮಾಡಿಲ್ಲ. ಪ್ರವಾಸಿಗರ ಹಿತದೃಷ್ಟಿಯಿಂದ  ನಿರ್ಬಂಧ ತೆರವು ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ದಸರಾ ಮಹೋತ್ಸವಕ್ಕೆ ಜನರನ್ನು ಬರಬೇಡಿ ಎಂದು ಹೇಳುತ್ತಿಲ್ಲ. ಬಂದರೂ ಕೊರೋನಾ ತಡೆಗಾಗಿ ಮಾರ್ಗಸೂಚಿಗಳನ್ನು ಪಾಲಿಸುವ ಮುಖಾಂತರ ದಸರಾ ನೋಡಿ ಎಂದು ಹೇಳುತ್ತಿದ್ದೇವೆ. ಚಾಮುಂಡಿ ಬೆಟ್ಟ ಹೊರತು ಪಡಿಸಿದರೆ ಉಳಿದೆಲ್ಲಾ ಪ್ರವಾಸಿ ತಾಣಗಳ ಮೇಲಿನ ನಿರ್ಬಂಧವನ್ನು ಹಿಂಪಡೆಯಲಾಗಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

Key words: Chamundi hill – time -set -this evening- Minister- ST Somashekhar.