Saturday, August 15, 2026

BDA Apartments

Home Front Page ತಪ್ಪಿತಸ್ಥರೆಂದು ಸಾಭೀತಾದರೆ ಖಂಡಿತ ಕ್ರಮ ಆಗುತ್ತೆ- ಸಂಸದ ಶ್ರೀನಿವಾಸ್ ಪ್ರಸಾದ್…

ತಪ್ಪಿತಸ್ಥರೆಂದು ಸಾಭೀತಾದರೆ ಖಂಡಿತ ಕ್ರಮ ಆಗುತ್ತೆ- ಸಂಸದ ಶ್ರೀನಿವಾಸ್ ಪ್ರಸಾದ್…

ಮೈಸೂರು,ಮೇ,5,2021(www.justkannada.in):  ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ಚರ್ಚೆ ಮಾಡಿದ್ದೇವೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಖಂಡಿತ ಕ್ರಮ ಆಗುತ್ತೆ ಎಂದು ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್,  ಪ್ರಕರಣ ಸಂಬಂಧ ಈಗಾಗಲೇ ತನಿಖೆಗೆ ಐಎಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ಅಲ್ಲದೇ ನಿವೃತ್ತ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ನಾನು ಮೈಸೂರು ಡಿಸಿ ಜೊತೆಗೂ ಮಾತನಾಡಿದ್ದೇನೆ. ಏನಾಯ್ತು ಎಂಬುದರ ಬಗ್ಗೆ ಮಾಹಿತಿ ಪಡೆದೆ. ಚಾಮರಾಜನಗರ ಜಿಲ್ಲಾಧಿಕಾರಿಗಳಿಂದಲೂ ಮಾಹಿತಿ ಪಡೆಯುತ್ತಿದ್ದೇನೆ ಎಂದರು.chamarajanagar-oxigen-death- case-definitely – action- MP Srinivas Prasad.

ಈ ದುರಂತ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ಹಾಗಾಗಿ ನಿಷ್ಪಕ್ಷಪಾತ ತನಿಖೆ ಬಳಿಕ ಎಲ್ಲವನ್ನ ಮಾತನಾಡುತ್ತೇನೆ. ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಖಂಡಿತ ಕ್ರಮ ಆಗುತ್ತೆ ಎಂದು ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್  ಹೇಳಿದರು.

Key words: chamarajanagar-oxigen-death- case-definitely – action- MP Srinivas Prasad.