ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಓರ್ವ ನೀರುಪಾಲು: ಮೂವರ ರಕ್ಷಣೆ

ಚಾಮರಾಜನಗರ,ಮೇ,28,2025 (www.justkannada.in): ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಓರ್ವ ನೀರುಪಾಲಾಗಿ ಮೂವರನ್ನ ರಕ್ಷಣೆ ಮಾಡಿರುವ ಘಟನೆ ಚಾಮರಾಜನಗರದ ಶಿವನಸಮುದ್ರದ ದರ್ಗಾದ ಹಿಂಭಾಗದ ಕಾವೇರಿ ನದಿಯಲ್ಲಿ ನಡೆದಿದೆ.

ನಂದಕುಮಾರ್ ನೀರುಪಾಲಾದ ವಿದ್ಯಾರ್ಥಿ. ಪ್ರಫುಲ್ಲ, ತುಷಾರಾ ಮತ್ತು ಪ್ರಮೋದ್ ರಕ್ಷಣೆ ಮಾಡಲಾಗಿದೆ.   ಬೆಂಗಳೂರು ಮೂಲದ ದಯಾನಂದ ಸಾಗರ್ ಮೆಡಿಕಲ್ ಕಾಲೇಜಿನ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ನದಿಯಲ್ಲಿ ಈಜಲು ನೀರಿಗಿಳಿದಿದ್ದರು.  ನಾಲ್ವರಲ್ಲಿ ಒಬ್ಬ ನೀರು ಪಾಲಾಗಿದ್ದು, ಮೂವರು ಬಚಾವ್ ಆಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರನ್ನ ರಕ್ಷಿಸಿದ್ದಾರೆ.vtu

ನಾಪತ್ತೆಯಾಗಿರುವ ವಿದ್ಯಾರ್ಥಿಗಾಗಿ ಶೋಧ ಕಾರ್ಯ ಮುಂದುವರಿದಿದೆ.  ಶಿವನ ಸಮುದ್ರಕ್ಕೆ ಏಳು ಮಂದಿ ವಿದ್ಯಾರ್ಥಿಗಳು ಪ್ರವಾಸ ಬಂದಿದ್ದರು. ಈ ವೇಳೆ ನದಿಯಲ್ಲಿ ಈಜಲು ನಾಲ್ವರು ವಿದ್ಯಾರ್ಥಿಗಳು ಇಳಿದಿದ್ದರು. ನೀರಿನ ರಭಸಕ್ಕೆ ಈಜಲಾಗದೆ ಪರದಾಡಿದ್ದು ಈ ವೇಳೆ ಓರ್ವ ನೀರುಪಾಲಾಗಿದ್ದಾನೆ.

ನದಿಯಲ್ಲಿ ಸಿಲುಕಿದ್ದ ಸ್ಥಿತಿಯ ಬಗ್ಗೆ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಕೊಳ್ಳೇಗಾಲ ಅಗ್ನಿಶಾಮಕ ಠಾಣಾಧಿಕಾರಿ ಅರುಣ್ ಕುಮಾರ್ ನೇತೃತ್ವದ ತಂಡವು ಪ್ರಫುಲ್ಲ, ತುಷಾರಾ ಮತ್ತು ಪ್ರಮೋದ್ ಎಂಬ ಮೂವರನ್ನ ರಕ್ಷಣೆ ಮಾಡಿದ್ದಾರೆ.

Key words: Kaveri River, swim, Death, Chamaraja nagar