‘ರಾಜವೀರ ಮದಕರಿ ನಾಯಕ’ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಹಾರಿದ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು , ಫೆಬ್ರವರಿ 10, 2020 (www.justkannada.in): ಚಾಲೆಂಜಿಂಗ್ ದರ್ಶನ್ ಈಗ ಕೇರಳ ಕಡೆ ಪಯಣ ಬೆಳೆಸಿದ್ದಾರೆ.

ಅಂದಹಾಗೆ ದರ್ಶನ್ ಕೇರಳ ಹೊರಟಿದ್ದು ಬಹುನಿರೀಕ್ಷೆಯ ಮದಕರಿ ನಾಯಕ ಚಿತ್ರದ ಚಿತ್ರೀಕರಣಕ್ಕಾಗಿ.

ಡಿ ಬಾಸ್ ಅಭಿನಯದ ಬಹು ನಿರೀಕ್ಷೆಯ ‘ರಾಜವೀರ ಮದಕರಿ ನಾಯಕ’ ಚಿತ್ರದ ಚಿತ್ರೀಕರಣ ಪ್ರಾರಂಭಕ್ಕೆ ಕಾಲ ಕೂಡಿ ಬಂದಿದೆ.

ಇಂದು ಬೆಳಗ್ಗೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್ ಕೊಟ್ಟು ಕೇರಳ ಪ್ಲೈಟ್ ಹತ್ತಿದ್ದಾರೆ. ಅಭಿಮಾನಿಗಳು ಸಂತಸದಿಂದ ದಚ್ಚು ಜೊತೆಗಿರುವ ಫೋಟೋ ಶೇರ್ ಮಾಡಿ ಚಿತ್ರಕ್ಕೆ ಶುಭಕೋರುತ್ತಿದ್ದಾರೆ. ಅಂದ್ಹಾಗೆ ಚಿತ್ರದ ಮೊದಲ ದೃಶ್ಯದ ಚಿತ್ರೀಕರಣವನ್ನು ಕೇರಳಿಂದ ಪ್ರಾರಂಭಿಸುತ್ತಿದೆ ಚಿತ್ರತಂಡ.

ಕೇರಳದ ಜಲಪಾತವೊಂದರಲ್ಲಿ ಮೊದಲ ದೃಶ್ಯ ಸೆರೆಹಿಡಿಯುತ್ತಿದೆ ಚಿತ್ರತಂಡ. ಕೆಲವೆ ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಲಿದೆ ಚಿತ್ರತಂಡ.