ಗ್ಯಾರಂಟಿಗಳಿಂದ ಆರ್ಥಕತೆ ಹಾಳು: ಅವರ ಶಾಸಕರೇ ಹೇಳುತ್ತಿದ್ದಾರೆ- ಚಲವಾದಿ ನಾರಾಯಣಸ್ವಾಮಿ ಟೀಕೆ

ಬೆಳಗಾವಿ,ಡಿಸೆಂಬರ್,10,2025 (www.justkannada.in):  ಗ್ಯಾರಂಟಿ ಯೋಜನೆಗಳಿಗೆ ಶಾಸಕಾಂಗ ಸಭೆಯಲ್ಲಿ ಅಪಸ್ವರ ವಿಚಾರ ಸಂಬಂಧ ಪ್ರತಿಕ್ರಿಯಸಿರುವ ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ, ಗ್ಯಾರಂಟಿಗಳಿಂದ ರಾಜ್ಯದ ಆರ್ಥಕತೆ ಹಾಳಾಗುತ್ತಿದೆ ಎಂದು ಕಾಂಗ್ರೆಸ್  ಶಾಸಕರೇ ಹೇಳುತ್ತಿದ್ದಾರೆ ಎಂದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ,  ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ, ಆರ್ಥಿಕ ವ್ಯವಸ್ಥೆ ಕುಂಠಿತವಾಗಿದೆ ಎಂದು ಅವರ ಶಾಸಕರೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳಿಂದ ಹೊಟ್ಟೆ ತುಂಬಲ್ಲ ಎಂದು ಲೇವಡಿ ಮಾಡಿದರು.

ಸಿಎಮ ಸಿದ್ದರಾಮಯ್ಯಗೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್  ಬಂದಿದೆ. ಸಚಿವ ಪ್ರಿಯಾಂಕ್ ಖರ್ಗೆಗೂ  ನೋಟೀಸ್ ಬಂದಿದೆ ಎಂದರು.

ದ್ವೇಷ ಭಾಷಣ ವಿಧೇಯಕ ಮಂಡನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ,  ದ್ವೇಷ ಭಾಷಣ ಮಾಡೋರು ಕಾಂಗ್ರೆಸ್ ನವರು.  ವಿಪಕ್ಷದ ವಿರುದ್ದ  ಎಫ್ಐಆರ್ ಹಾಕುತ್ತಾರೆ.  ಬೇರೆಯವರನ್ನ ಹಣಿಯಲು ಸರ್ಕಾರ  ಹುನ್ನಾರ ಮಾಡುತ್ತಿದೆ ಎಂದು ಕಿಡಿಕಾರಿದರು.

Key words: Guarantees, ruining, economy, Chalawadi Narayanaswamy, criticizes