Wednesday, August 19, 2026

BDA Apartments

Home Crime ಮೈಸೂರು ಪೊಲೀಸರಿಗೆ ತಲೆ ನೋವು ತಂದ ಚಾಲಾಕಿ ಪೆಟ್ರೋಲ್ ಕಳ್ಳರು

ಮೈಸೂರು ಪೊಲೀಸರಿಗೆ ತಲೆ ನೋವು ತಂದ ಚಾಲಾಕಿ ಪೆಟ್ರೋಲ್ ಕಳ್ಳರು

ಮೈಸೂರು, ಜನವರಿ 04, 2019 (www.justkannada.in): ಅರಮನೆ ನಗರಿ ಮೈಸೂರಿನಲ್ಲಿ ಇದೀಗ ಪೆಟ್ರೋಲ್ ಕಳ್ಳರ ಹಾವಳಿ ಆರಂಭವಾಗಿದೆ.

ಮನೆಗಳ್ಳರು, ಸರಗಳ್ಳರ ಕಾಟದ ನಡುವೆಯೇ ಇದೀಗ ಪೆಟ್ರೋಲ್ ಕಳ್ಳರ ಸರದಿಯೂ ಶುರುವಾಗಿದೆ. ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸಿರುವ ಪೆಟ್ರೋಲ್ ಕಳ್ಳರು. ಮೈಸೂರಿನ ಹೃದಯ ಭಾಗದಲ್ಲೇ ವಾಹನಗಳ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದಾರೆ.

ಬೆಳಗಿನ ಜಾವ ಮೂರು ಗಂಟೆ ಬಳಿಕ ಪೆಟ್ರೋಲ್ ಕದಿಯುವ ಕಾರ್ಯಾಚರಣೆಗೆ ಇಳಿಯುವ ಚಾಲಾಕಿ ಕಳ್ಳರು. ಮನೆಗಳ ಮುಂದೆ ವಾಹನಗಳನ್ನು ನಿಲ್ಲಿಸುವ ಜನರು ಸುಖ ನಿದ್ರೆಯಲ್ಲಿರುವಾಗಲೇ ಪೆಟ್ರೋಲ್ ಮಂಗ ಮಾಯ ಮಾಡುತ್ತಿದ್ದಾರೆ.

ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ಪೆಟ್ರೋಲ್ ಕದಿಯುತ್ತಿರುವ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ. ಪೆಟ್ರೋಲ್ ಕಳ್ಳರ ಹಾವಳಿಯಿಂದಾಗಿ ವಾಹನ ಸವಾರರು ಕಂಗಾಲಾಗಿದ್ದಾರೆ.. ಪೊಲೀಸರು ರಾತ್ರಿ ಗಸ್ತು ತೀವ್ರಗೊಳಿಸುವ ಮೂಲಕ ಪೆಟ್ರೋಲ್ ಕಳ್ಳರ ಹಾವಳಿ ತಡೆಗಟ್ಟುವಂತೆ ಆಗ್ರಹಿಸುತ್ತಿರುವ ಸಾರ್ವಜನಿಕರು.