Thursday, August 20, 2026

BDA Apartments

Home Front Page ಕನ್ನಡದಲ್ಲಿ ಟ್ವೀಟ್ ಮಾಡಿ ಆರ್ ಸಿಬಿ ಫ್ಯಾನ್ಸ್ ಮನ ಗೆದ್ದ ಚಾಹಲ್

ಕನ್ನಡದಲ್ಲಿ ಟ್ವೀಟ್ ಮಾಡಿ ಆರ್ ಸಿಬಿ ಫ್ಯಾನ್ಸ್ ಮನ ಗೆದ್ದ ಚಾಹಲ್

ಬೆಂಗಳೂರು, ಏಪ್ರಿಲ್ 1, 2021 (www.justkannada.in): 

ಕನ್ನಡದಲ್ಲಿ ಟ್ವೀಟ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಯಜುವೇಂದ್ರ ಚಾಹಲ್ ಗೆ ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಚೆನ್ನೈನಲ್ಲಿ ಆರ್ ಸಿಬಿ ತಂಡ ಕೂಡಿಕೊಂಡಿರುವ ಚಾಹಲ್, ಕ್ವಾರಂಟೈನ್ ಮುಗಿಸಿ ಅಭ್ಯಾಸ ಆರಂಭಿಸಿದ್ದಾರೆ. ಈ ನಡುವೆ ಚಾಹಲ್ ಕನ್ನಡದಲ್ಲಿ ಮಾಡಿರುವ ಟ್ವೀಟ್ ಕಂಡು ಆರ್ ಸಿಬಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ಆರ್ ಸಿಬಿ ಕುಟುಂಬದೊಂದಿಗೆ ಮತ್ತೆ ಒಂದಾಗಲು ನನಗೆ ತುಂಬಾ ಸಂತೋಷವಾಗಿದೆ!’ ಎಂದು ಕನ್ನಡದಲ್ಲೇ ಚಾಹಲ್ ಟ್ವೀಟ್ ಮಾಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.