ಜಾತಿ ನಿಂದನೆ ಆರೋಪ : ಸೆಸ್ಕಾಂ ವಿದ್ಯುತ್‌ ಗುತ್ತಿಗೆದಾರ ನ್ಯಾಯಾಂಗ ಬಂಧನಕ್ಕೆ.

An FIR has been registered against electrical contractor R. Sripal, on charges of obstruction of duty and caste abuse. The accused has been remanded in judicial custody. The police have taken this action on the complaint filed by S.B. Anita, who is working as an executive engineer in the city's N. R. Mohalla CESCOM.

 

ಮೈಸೂರು, ಡಿ.೨೦,೨೦೨೫: ಸೆಸ್ಕಾಂ ನ ಕಾರ್ಯಪಾಲಕ ಇಂಜಿನಿಯರ್‌ ಕರ್ತವ್ಯಕ್ಕೆ ಅಡ್ಡಿ ಹಾಗೂ ಜಾತಿ ನಿಂದನೆ ಆರೋಪದ ಮೇಲೆ ವಿದ್ಯುತ್‌ ಗುತ್ತಿಗೆದಾರ ಆರ್.ಶ್ರೀಪಾಲ್‌  ವಿರುದ್ಧ ದೂರು ನೀಡಿದ ಹಿನ್ನೆಲೆ ಎಫ್.ಐ.ಆರ್. ದಾಖಲು. ಆರೋಪಿ ನ್ಯಾಯಾಂಗ ಬಂಧನಕ್ಕೆ.

ನಗರದ ಎನ್. ಆರ್.ಮೊಹಲ್ಲ ಸೆಸ್ಕಾಂ  ವಿಭಾಗದಲ್ಲಿ ಕಾರ್ಯಪಾಲಕ ಇಂಜಿನಿಯರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್.ಬಿ.ಅನಿತಾ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರಿಂದ ಈ ಕ್ರಮ ಜರುಗಿಸಲಾಗಿದೆ.

ಘಟನೆ ವಿವರ:

ಶ್ರೀಪಾಲ್ ಆರ್ ಎಂಬ ವಿದ್ಯುತ್ ಗುತ್ತಿಗೆದಾರ ಪದೇ ಪದೇ ನನ್ನ ಬಳಿ ಬಂದು ಆಕ್ರಮವಾಗಿ ಕಾನೂನು ಬಾಹಿರ ಸರ್ಕಾರಿ ಕೆಲಸವನ್ನು ತನ್ನ ಪರವಾಗಿ ಮಾಡುವಂತೆ ಒತ್ತಡ ಹಾಕುತ್ತಿದ್ದ. ಇದಕ್ಕೆ ಪ್ರತಿಯಾಗಿ ನಾನು ಅವರ ಆಕ್ರಮ ಬೇಡಿಕೆಗಳನ್ನು ತಿರಸ್ಕರಿಸಿದ ಕಾರಣ ಅವರು ನನ್ನ ಮೇಲೆ ಕಛೇರಿ ಸಮಯದಲ್ಲಿ ಜಗಳ ತೆಗೆದು ಇಲ್ಲ ಸಲ್ಲದ ಆರೋಪ ಮಾಡಿ ತೆಜೋವಧೆ ಮಾಡಿ ನಿಂದಿಸಿದ ಹಿನ್ನೆಲೆಯಲ್ಲಿ ಫೆ. ೨೧ ರಂದು  ಕಾರ್ಯಪಾಲಕ ಇಂಜಿನಿಯರ್‌ ಅನಿತಾ, ಮೈಸೂರು ನಗರ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಮೊ.ನಂ-11/25 ರಂತೆ ಪ್ರಕರಣ ದಾಖಲಿಸಿದರು.

ಈ ಘಟನೆ ಬಳಿಕ ವಿದ್ಯುತ್ ಗುತ್ತಿಗೆದಾರ ಶ್ರೀಪಾಲ್ ಆರ್, ನನ್ನ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ನನ್ನ ಮುಂದೆ ಮತ್ತು ನನ್ನ ಸಹೋದ್ಯೋಗಿಗಳು ಪರಿಚಯಸ್ಮರು, ಹಾಗೂ ಸಾರ್ವಜನಿಕರಲ್ಲಿ, ಪದೇ-ಪದೇ ಜಾತಿ ನಿಂದಿಸಿ ಹಂಗಿಸುತ್ತಿದ್ದ . ಜತೆಗೆ ನನ್ನ ಮೇಲೆ ಭ್ರಷ್ಟಚಾರ ಸೇರಿದಂತೆ ಇಲ್ಲ ಸಲ್ಲದ ಲೈಂಗಿಕ ಆರೋಪಗಳನ್ನು ಮಾಡುವ ಮೂಲಕ ತೇಜೋವಧೆ ಮಾಡುತ್ತಿದ್ದ ಎಂದು ಅನಿತಾ ದೂರಿನಲ್ಲಿ ಆರೋಪಿಸಿದ್ದಾರೆ.

ಏಕವಚನದಲ್ಲಿ ನನ್ನ ಜಾತಿಯಿಂದ ಗುರುತಿಸಿ ಸಾರ್ವಜನಿಕವಾಗಿ ಮಾತನಾಡಿರುವ ಶ್ರೀಪಾಲ್ ಕೃತ್ಯದಿಂದ ನನ್ನ ಮನಸ್ಸಿಗೆ ನೋವಾಗಿದ್ದು ನಾನು ಸಮಾಜದಲ್ಲಿ ತಲೆ ಎತ್ತಿ ಬದುಕಲು ತೊಂದರೆ ಯಾಗುತ್ತಿದೆ. ಮೇಲ್ಕಂಡ ವಿದ್ಯುತ್ ಗುತ್ತಿಗೆದಾರನ ಜಾತಿ ನಿಂದನೆ, ಲೈಂಗಿಕ ಅರ್ಥ ಹೊಂದಂತಿರುವ ಅವಮಾನಕಾರಿ ಮಾತುಗಳಿಂದ ನನ್ನ ಖಾಸಗಿ ಜೀವನ ಮತ್ತು ವೃತ್ತಿ ಜೀವನಕೆ ತೀವ್ರ ಹಾನಿಯಾಗಿದ್ದು, ನಾನು ಮಾನಸಿಕವಾಗಿ ಕುಗ್ಗಿ ಹೋಗಿರುವುದಲ್ಲದೆ ಜೀವನದಲ್ಲಿ ಜಿಗುಪ್ಪೆ, ಉಂಟಾಗಿದೆ ಎಂದು ದೂರಿನಲ್ಲಿ ಹೇಳಿಕೆ ದಾಖಲಿಸಿದ್ದಾರೆ.

ಲೈನೆನ್ಸ್‌ ರದ್ದತಿಗೆ ಆಗ್ರಹ:

ಈ ಘಟನೆಯನ್ನು ಖಂಡಿಸಿರುವ ಡಾ.ಬಿ.ಆರ್ಾಂಬೇಡ್ಕರ್‌ ದಲಿತ ಮಹಾಸಭಾ ಅಧ್ಯಕ್ಷ ಪುಟ್ಟರಂಗಸ್ವಾಮಿ, ಆರೋಪಿ ಶ್ರೀಪಾಲ್‌ ರ ವಿದ್ಯುತ್‌ ಗುತ್ತಿಗೆ ಲೈಸೆನ್ಸ್‌ ರದ್ದು ಪಡಿಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಮಹಾದೇವಪ್ಪ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ ಹಾಗೂ ಮಹಿಳಾ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದು ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

key words: Caste abuse, allegations, CESCOM, electricity contractor, remanded in judicial custody.

SUMMARY:

Caste abuse allegations: CESCOM electricity contractor remanded in judicial custody.

An FIR has been registered against electrical contractor R. Sripal, on charges of obstruction of duty and caste abuse. The accused has been remanded in judicial custody. The police have taken this action on the complaint filed by S.B. Anita, who is working as an executive engineer in the city’s N. R. Mohalla CESCOM.