ಯಾದಗಿರಿಗೆ ಕೇಂದ್ರ ಅಧ್ಯಯನ ತಂಡ ಭೇಟಿ: ನೆರೆಹಾನಿ ಪ್ರದೇಶಗಳ ಪರಿಶೀಲನೆ.

ಯಾದಗಿರಿ,ಸೆಪ್ಟಂಬರ್,9,2022(www.justkannada.in): ರಾಜ್ಯದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಅಧ್ಯಯನ ತಂಡ ನೆರೆಹಾನಿ ವೀಕ್ಷಣೆ ಮಾಡುತ್ತಿದೆ.

ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮೂರು ತಂಡಗಳಾಗಿ ಪರಿಶೀಲನೆ ನಡೆಸುತ್ತಿದ್ದು ಇಂದು ಯಾದಗಿರಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿದೆ. ಯಾದಗಿರಿ ಜಿಲ್ಲೆ ವಡಗೇರ ತಾಲ್ಲೂಕಿನ  ಗುರುಸಣಗಿಯಲ್ಲಿ ಪರಿಶೀಲನೆ ನಡೆಸಿದ್ದು, ಪರಿಶೀಲನೆ ವೇಳೆ ಅಧಿಕಾರಿಗಳ ಮುಂದೆ ರೈತರು ಅಳಲು ತೋಡಿಕೊಂಡಿದ್ದಾರೆ.

ನಿನ್ನೆ ಕಲ್ಬುರ್ಗಿಯಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಿ.ಕೆ. ಮನೋಹರನ್ ನೇತೃತ್ವದಲ್ಲಿನ ಕೇಂದ್ರ ಅಧ್ಯಯನ ತಂಡ ಪರಿಶೀಲನೆ ನಡೆಸಿತ್ತು. ಹುಬ್ಬಳ್ಳಿಯಲ್ಲೂ  ನೆರೆಹಾನಿ ವೀಕ್ಷಣೆ ಮಾಡಲಾಗಿತ್ತು.

Key words:  Central –Study-Team- Visit – Yadgiri-flood