ಬೆಂಗಳೂರು,ಸೆಪ್ಟಂಬರ್,20,2025 (www.justkannada.in): ಸೆಪ್ಟಂಬರ್ 22 ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇಂದು ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಒಕ್ಕಲಿಗರ ಸಭೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್ .ಡಿ ಕುಮಾರಸ್ವಾಮಿ, ಸಮಾಜಕ್ಕೆ ಬೆಂಕಿ ಹಚ್ಚೋಕೆ ಏನ್ ಮಾಡಬೇಕೋ ಮಾಡಿದ್ದಾರೆ. ಮುಂದಾಲೋಚನೆ ಮಾಡದೇ ಹೆಜ್ಜೆ ಇಟ್ಟಿದ್ದಾರೆ. ಸಮಾಜಕ್ಕೆ ಅನ್ಯಾಯವಾಗುವಂತೆ ವರದಿ ಬಂದರೆ ಸ್ವಾಮೀಜಿ ನೇತೃತ್ವದಲ್ಲಿ ಮುಂದಿನ ಕಾರ್ಯಕ್ರಮ ಕೈಗೊಳ್ಳುತ್ತೇವೆ ಎಂದು ಪರೋಕ್ಷವಾಗಿ ಎಚ್ಚರಿಕೆ ಕೊಟ್ಟರು.
ಸಮೀಕ್ಷೆಗ ಕಾಲಾವಕಾಶ ನೀಡೋದು ಮುಖ್ಯವಲ್ಲ ಜಾತಿಗಣತಿಯಲ್ಲಿ ವಾಸ್ತವಾಂಶ ಏನಿದೆ ಅನ್ನೋದು ಮುಖ್ಯ. ಸರ್ಕಾರದ ಜಾತಿಗಣತಿ ಬಗ್ಗೆ ಚರ್ಚೆಯಾಗಬೇಕು. ಸರ್ಕಾರ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಹೆಚ್ ಡಿಕೆ ವಾಗ್ದಾಳಿ ನಡೆಸಿದರು.
Key words: Social and educational survey, Central Minister, HDK