Saturday, September 19, 2026

BDA Apartments

ನಾನು ಕಂಡವರ ಸಂಪತ್ತು ಹೊಡೆದು ಜೀವನ ಮಾಡಿಲ್ಲ- ಡಿಕೆಶಿಗೆ ಹೆಚ್.ಡಿಕೆ ಟಾಂಗ್ BDA ...
Home Front Page ನಾನು ಕಂಡವರ ಸಂಪತ್ತು ಹೊಡೆದು ಜೀವನ ಮಾಡಿಲ್ಲ- ಡಿಕೆಶಿಗೆ ಹೆಚ್.ಡಿಕೆ ಟಾಂಗ್

ನಾನು ಕಂಡವರ ಸಂಪತ್ತು ಹೊಡೆದು ಜೀವನ ಮಾಡಿಲ್ಲ- ಡಿಕೆಶಿಗೆ ಹೆಚ್.ಡಿಕೆ ಟಾಂಗ್

ಬೆಂಗಳೂರು,ಜುಲೈ,15,2024 (www.justkannada.in): ಕಸದ ಟೆಂಡರ್ ನಲ್ಲೂ ಕಿಕ್ ಬ್ಯಾಕ್ ಮಾಡಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿ,  ಅವರು ಕಸದ ಲಾರಿ ಹೊಡಿತಿದ್ರು ಎಂದು ವಾಗ್ದಾಳಿ ನಡೆಸಿದ್ದ ಡಿಸಿಎಂ ಡಿಕೆ ಶಿವಕುಮಾರ್  ಹೇಳಿಕೆಗೆ  ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ,  ನಾವು ಕಸವೂ ಹೋರ್ತಿವಿ ಸಿನಿಮಾ ಡಬ್ಬನೂ ಹೊರುತ್ತೇವೆ.  ಏನೇ ಮಾಡಿದ್ರೂ ಪ್ರಾಮಾಣಿಕವಾಗಿ ಮಾಡುತ್ತೇವೆ. ಡಿಕೆ ಶಿವಕುಮಾರ್ ರಂತೆ ಕಾನೂನು ವಿರೋಧ ಕೆಲಸ ಮಾಡಲ್ಲ ಕಂಡವರ ಸಂಪತ್ತು ಹೊಡೆದು ಜೀವನ ಮಾಡಿಲ್ಲ ಎಂದು ಟಾಂಗ್ ಕೊಟ್ಟರು.ನಾನು ಕಂಡವರ ಸಂಪತ್ತು ಹೊಡೆದು ಜೀವನ ಮಾಡಿಲ್ಲ hdk hdk 1

ಇನ್ನು ಕಾವೇರಿ ನದಿ ನೀರು ವಿವಾದ ಕುರಿತು ಸರ್ವಪಕ್ಷ ಸಭೆಗೆ ಗೈರಾದ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಸಭೆಗೂ ಮುನ್ನವೇ ತಮಿಳುನಾಡಿಗೆ ನೀರು ಹರಿಸಿದ್ದಾರೆ. ನೀರು ಬಿಟ್ಟ ಮೇಲೆ ಸಭೆ ಕರೆದಿದ್ದಾರೆ.  ಹೀಗಿರುವಾಗ ನಾನು ಸಭೆಗೆ ಗೋಡಂಬಿ ತಿನ್ನಲು ಹೋಗಬೇಕಿತ್ತಾ. ಸರ್ವಪಕ್ಷ ಸಭೆ ಕಾಟಾಚಾರಕ್ಕೆ ಮಾಡಿದ್ದಾರೆ

Key words: Central minister,  HD Kumarswamy, DCM, DK Shivakumar