ಕೇಂದ್ರ ಸರ್ಕಾರದ ಜುಟ್ಟು ಹಿಡಿದು ಏಕೆ ಪ್ರಶ್ನೆ ಮಾಡುತ್ತಿಲ್ಲ..? – ಶಾಸಕ ಶಿವಲಿಂಗೇಗೌಡ ಕಿಡಿ

ಬೆಂಗಳೂರು,ಮಾರ್ಚ್,16,2021(www.justkannada.in):  ಪ್ರವಾಹಕ್ಕೂ ದುಡ್ಡಿಲ್ಲ. ಬರಕ್ಕೂ ದುಡ್ಡಿಲ್ಲ,  ನಿಮ್ಮ ಬಳಿ ಯಾವುದಕ್ಕೂ ದುಡ್ಡಿಲ್ಲ. ರಾಜ್ಯದ ಸಂಸದರು ಏನು ಮಾಡುತ್ತಿದ್ದಾರೆ? ಕೇಂದ್ರ ಸರ್ಕಾರದ ಜುಟ್ಟು ಹಿಡಿದು  ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಕಿಡಿಕಾರಿದರು.jk

ಇಂದು ಸದನಲ್ಲಿ ಬಜೆಟ್ ಮೇಲೆ ಚರ್ಚೆ ನಡೆಸಿಯಿತು. ಈ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡರು, ಅನುದಾನ ವಿಚಾರದಲ್ಲಿ ತಾರತಮ್ಯ ಮಾಡಾಲಾಗುತ್ತಿದೆ. ಬಜೆಟ್ ಯಾಕೆ ಮಂಡಿಸಬೇಕು? ಬರೀ ಪುಸ್ತಕದಲ್ಲಿದ್ರೆ ಸಾಕಾಗುತ್ತಾ? ಶಾಸಕರನ್ನ ಹೀನಾಯ ಸ್ಥಿತಿಗೆ ತಂದು ಇಟ್ಟಿದ್ದೀರಲ್ಲಾ? ನಾವೇನ್‌ ಮಾಡ್ಬೇಕು? ಎಂದು  ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.central government –jds-MLA- Shivalinga Gowda

ಕೇಂದ್ರ, ರಾಜ್ಯ ಎರಡೂ ಕಡೆಯೂ ನಿಮ್ಮದೇ ಸರ್ಕಾರವಿದೆ. ನಿಮ್ಮ ಬಳಿ ಯಾವುದಕ್ಕೂ ದುಡ್ಡಿಲ್ಲ. ನಮ್ಮ ರಾಜ್ಯದ ಸಂಸದರು ಏನು ಮಾಡುತ್ತಿದ್ದಾರೆ? ಕೇಂದ್ರ ಸರ್ಕಾರದ ಜುಟ್ಟು ಹಿಡಿದು ಏಕೆ ಪ್ರಶ್ನೆ ಮಾಡುತ್ತಿಲ್ಲ..? ಎಂದು ಪ್ರಶ್ನಿಸಿದರು.

 

Key words: central government –jds-MLA- Shivalinga Gowda