Tuesday, September 22, 2026

BDA Apartments

ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು-ಧರಣಿನಿರತ...
Home Front Page ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು-ಧರಣಿನಿರತರ ಸಮಸ್ಯೆ ಆಲಿಸಿ ಸಚಿವ ರಾಮಲಿಂಗರೆಡ್ಡಿ ಆಗ್ರಹ.

ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು-ಧರಣಿನಿರತರ ಸಮಸ್ಯೆ ಆಲಿಸಿ ಸಚಿವ ರಾಮಲಿಂಗರೆಡ್ಡಿ ಆಗ್ರಹ.

ಬೆಂಗಳೂರು,ಸೆಪ್ಟಂಬರ್,26,2023(www.justkannada.in): ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಸಂಕಷ್ಟ ಸೂತ್ರದಡಿ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಕ್ರಮಕೈಗೊಳ್ಳಬೇಕು ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಆಗ್ರಹಿಸಿದರು.

ರೈತಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಸ್ಥಳಕ್ಕೆ ಭೇಟಿ ನೀಡಿದ ಸಚಿವ ರಾಮಲಿಂಗರೆಡ್ಡಿ ಬೇಡಿಕೆಯನ್ನ ಆಲಿಸಿದರು.ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ramalingareddy

ಬಳಿಕ ಮಾತನಾಡಿದ ಅವರು,   ನೆಲಜಲ ಭಾಷೆ ವಿಷಯದಲ್ಲಿ ಅನ್ಯಾಯವಾದಾಗ ಹೋರಾಟ ಮಾಡೋದು ಸಹಜ.  ಕಾವೇರಿ ನೀರಿನ ವಿಚಾರವಾಗಿ ಎಲ್ಲ ಸಂಘಟನೆಗಳು ಬಂದ್​​ಗೆ ಕರೆ ನೀಡಿವೆ. ನಮ್ಮ ಹೋರಾಟದ ಜೊತೆ ಸರ್ಕಾರವು ಇರುತ್ತೆ. ನಿಮ್ಮ ಹೋರಾಟದ ವಿಚಾರ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇವೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಸಂಕಷ್ಟ ಸೂತ್ರದಡಿ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಕ್ರಮಕೈಗೊಳ್ಳಬೇಕು. ಕಾವೇರಿ ವ್ಯಾಪ್ತಿಯ ನಾಲ್ಕು ರಾಜ್ಯಗಳ ಸಿಎಂಗಳನ್ನು ಕರೆದು ಸಭೆ ಮಾಡಬೇಕು. ನಾವು ಕೂಡ ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ನಿಮ್ಮ ಮನವಿಗಳನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಚರ್ಚೆ ಮಾಡುತ್ತೇವೆ ಎಂದು ಭರವಸೆ ನೀಡಿದರು.

Key words: Central government – issue -Cauvery water-Minister -Ramalingareddy