ಕಾಶ್ಮೀರಿ ಪಂಡಿತರ ರಕ್ಷಣೆ ಮಾಡುವಲ್ಲಿ ಕೇಂದ್ರ ವಿಫಲ: ಅಮಿತ್ ಶಾ ರಾಜೀನಾಮೆಗೆ ಕೆ‌.ಎಸ್.ಶಿವರಾಮು ಒತ್ತಾಯ.

ಮೈಸೂರು,ಜೂನ್,4,2022(www.justkannada.in):  ಅಮಾಯಕ ಕಾಶ್ಮೀರಿ ಪಂಡಿತರ ಹತ್ಯೆ ಖಂಡನೀಯ. ಕಾಶ್ಮೀರಿ ಪಂಡಿತರ ರಕ್ಷಣೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ‌.ಎಸ್.ಶಿವರಾಮು ಒತ್ತಾಯಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆ.ಎಸ್ ಶಿವರಾಮು, ಹಿಂದುತ್ವದ ಪ್ರತಿಪಾದನೆ ಮಾಡುವ ಕೇಂದ್ರ ಬಿಜೆಪಿ ಸರ್ಕಾರ ಅಮಾಯಕ ಕಾಶ್ಮೀರಿ ಪಂಡಿತರ ಹತ್ಯೆ ತಡೆಯುವಲ್ಲಿ ವಿಫಲವಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆಯನ್ನು ನರೇಂದ್ರ‌ ಮೋದಿಯವರು ಅಸ್ವಾದಿಸುತ್ತಿದ್ದಾರೆ. ನೀವು 370ನೇ ವಿಧಿಯನ್ನು ರದ್ದು ಮಾಡಿದ್ರಿ. ಆದರೆ‌ ಇದರಿಂದ ಕಾಶ್ಮೀರಿ ಪಂಡಿತರಿಗೆ ಸಾಕಷ್ಟು ಅನ್ಯಾಯವಾಯಿತು. ಕಾಶ್ಮೀರಿ ಪಂಡಿತರನ್ನು ರಕ್ಷಣೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.  ಹಿಂದೂ ಪಂಡಿತರನ್ನ ಗುಂಡಿಕ್ಕಿ ಕೊಲ್ಲುತ್ತಿದ್ದಾರೆ. ಕೂಡಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪಠ್ಯ ಪರಿಷ್ಕರಣೆ ಸಂಬಂಧ ಸಾಹಿತಿ ಎಸ್.ಎಲ್.ಭೈರಪ್ಪ ಮಾತಿಗೆ ಖಂಡನೆ ವ್ಯಕ್ತಪಡಿಸಿದ ಕೆ.ಎಸ್.ಶಿವರಾಮು, ಎಸ್.ಎಲ್.ಭೈರಪ್ಪ ಅವರು ಮನುವಾದಿ ಲೇಖಕ. ಅವರು ‌ಒಂದು ಜಾತಿಯ ಪರವಾಗಿ ಮಾತನಾಡುತ್ತಾರೆ. ಮಕ್ಕಳಿಗೆ ಸತ್ಯವನ್ನೆ ಹೇಳಬೇಕು. ಆದರೆ ಎಲ್ಲಾ ವರ್ಗಗಳ ಸತ್ಯವನ್ನು ಹೇಳಲು ಹೇಳಿ. ಬರಿ ಮೇಲ್ವರ್ಗದವರ ಬಗ್ಗೆ ಹೇಳಿದರೆ ಸಾಕೆ..? ಹಿಂದುಳಿದವರ ಮೇಲೆ ನಡೆದಿರುವ ಶೋಷಣೆ ಬಗ್ಗೆ ತಿಳಿಸಿ. ಅದನ್ನ ಬಿಟ್ಟು ನಿಮ್ಮ ಬಗ್ಗೆ ಮಾತ್ರ ಮಕ್ಕಳಿಗೆ ತಿಳಿಸಿದರೆ ಸಾಲದು ಎಂದು ಚಾಟಿ ಬೀಸಿದರು.

Key words: Central -failure -protect -Kashmiri Pandits-KS Shivaramu-mysore