Sunday, August 2, 2026

BDA Apartments

Home Front Page ಆಂಧ್ರ, ಬಿಹಾರಕ್ಕೆ ಅನುದಾನ ಘೋಷಣೆ :  ರಾಜ್ಯಕ್ಕೆ ಏನ್ ಕೊಟ್ರು? ಹೆಚ್.ಡಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಆಂಧ್ರ, ಬಿಹಾರಕ್ಕೆ ಅನುದಾನ ಘೋಷಣೆ :  ರಾಜ್ಯಕ್ಕೆ ಏನ್ ಕೊಟ್ರು? ಹೆಚ್.ಡಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಮೈಸೂರು,ಜುಲೈ,29,2024 (www.justkannada.in):  ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ತಾರತಮ್ಯ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಂಡ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಭದ್ರಾ ಯೋಜನೆ  ಬಗ್ಗೆ  ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರಾ?  ಆಂಧ್ರ ಪ್ರದೇಶ, ಬಿಹಾರಕ್ಕೆ ವಿಶೇಷ ಅನುದಾನ ಘೋಷಣೆ ಮಾಡಿದರು. ಆದರೆ  ರಾಜ್ಯಕ್ಕೆ ಏನು ಕೊಟ್ಟಿದ್ದಾರೆ.  ಹೆಚ್.ಡಿ ಕುಮಾರಸ್ವಾಮಿ ಕ್ಷೇತ್ರ ಮಂಡ್ಯಕ್ಕೆ ಕೈಗಾರಿಕೆ ಏನಾದರೂ ಬಂತಾ ? ಮೈಸೂರು ಅಥವಾ ಹಾಸನಕ್ಕೆ ಐಐಟಿ ಕೇಳಿದ್ದವು ಕೊಟ್ರಾ?  ನಿರ್ಮಲಾ ಸೀತಾರಾಮನ್ ರಾಜ್ಯದಿಂದಲೇ ಆಯ್ಕೆಯಾಗಿದ್ದಾರೆ. ಆದರೂ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಮುಡಾ, ವಾಲ್ಮೀಕಿ ನಿಗಮ ಹಗರಣ ಖಂಡಿಸಿ ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ಬಿಜೆಪಿ ಅವಧಿಯಲ್ಲಿ ಹಗರಣಗಳು ನಡೆದಿಲ್ವಾ? ಬಿಜೆಪಿ ಅವಧಿಯ  21 ಹಗರಣಗಳನ್ನ ಹೇಳಿದ್ದೇನೆ. ಬಿಜೆಪಿ ಸರ್ಕಾರ ಒಂದು ಕೇಸ್ ಆದ್ರೂ ಸಿಬಿಐಗೆ ಕೊಟ್ರಾ ಎಂದು ಪ್ರಶ್ನಿಸಿದರು.

Key words: central budget, HDK, CM Siddaramaiah, mysore