ಸಿಡಿ ಪ್ರಕರಣ: ಎಸ್ ಐಟಿ ವಿಚಾರಣೆಗೆ ಸಂತ್ರಸ್ತ ಯುವತಿ ಕರೆದೊಯ್ದ ಪೊಲೀಸರು…

ಬೆಂಗಳೂರು,ಮಾರ್ಚ್,30,2021(www.justkannada.in): ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದ ಜಡ್ಜ್ ಮುಂದೆ ಹಾಜರಾಗಿ ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದು ಆ ಬಳಿಕ ಯುವತಿಯನ್ನ ಎಸ್ ಐಟಿ ವಿಚಾರಣೆಗೆ ಕರೆದೊಯ್ಯಲಾಗುತ್ತಿದೆ.

ಅಡುಗೋಡಿಯ ಟೆಕ್ನಿಕಲ್ ವಿಂಗ್ ಗೆ ಸಂತ್ರಸ್ತ ಯುವತಿಯನ್ನ ಪೊಲೀಸರು ಕರೆದೊಯ್ಯುತ್ತಿದ್ದು ಎಸ್ ಐಟಿ ಅಧಿಕಾರಿಗಳು ಯುವತಿಯನ್ನ ವಿಚಾರಣೆ ನಡೆಸಲಿದ್ದಾರೆ. CD The case-  police -girl – SIT-investigation.

ಬಿಗಿ ಭದ್ರತೆಯೊಂದಿಗೆ ಗೌಪ್ಯವಾಗಿ ಸಂತ್ರಸ್ತ ಯುವತಿಯನ್ನ ಎಸಿಎಂಎಂ ಕೋರ್ಟ್ ಜಡ್ಜ್ ಎದುರು ಹಾಜರುಪಡಿಸಲಾಗಿತ್ತು. ವಸಂತನಗರದ ಗುರುನಾನಕ್ ಭವನದಲ್ಲಿರುವ ವಿಶೇಷ ಕೋರ್ಟ್ ನಲ್ಲಿ ಜಡ್ಜ್ ಮುಂದೆ ಯುವತಿ ಹೇಳಿಕೆ ನೀಡಿದರು.

Key words: CD The case-  police -girl – SIT-investigation.