Thursday, September 17, 2026

BDA Apartments

ಸಿಡಿ ಪ್ರಕರಣ: ತನಿಖೆ ಬಳಿಕ ನಿರ್ದೇಶಕ, ನಿರ್ಮಾಪಕ ಯಾರೆಂದು ಗೊತ್ತಾಗಲಿದೆ- ಸಿ....
Home Front Page ಸಿಡಿ ಪ್ರಕರಣ: ತನಿಖೆ ಬಳಿಕ ನಿರ್ದೇಶಕ, ನಿರ್ಮಾಪಕ ಯಾರೆಂದು ಗೊತ್ತಾಗಲಿದೆ- ಸಿ.ಟಿ ರವಿ….

ಸಿಡಿ ಪ್ರಕರಣ: ತನಿಖೆ ಬಳಿಕ ನಿರ್ದೇಶಕ, ನಿರ್ಮಾಪಕ ಯಾರೆಂದು ಗೊತ್ತಾಗಲಿದೆ- ಸಿ.ಟಿ ರವಿ….

ಚಿಕ್ಕಮಗಳೂರು,ಮಾರ್ಚ್,15,2021(www.justkannada.in):  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ತನಿಖೆಯಾಗಲಿ, ತನಿಖೆ ಬಳಿಕ ನಟ, ನಿರ್ಮಾಪಕ, ನಿರ್ದೇಶಕ ಯಾರು ಅಂತಾ ಗೊತ್ತಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.jk

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಿ.ಟಿ ರವಿ, ಸಿಡಿ ಪ್ರಕರಣದಲ್ಲಿ ಡಿ. ಕೆ ಶಿವಕುಮಾರ್ ತನ್ನ ಹೆಸರನ್ನ ಯಾಕೆ ತಳುಕು ಹಾಕುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ. ಸಿ.ಡಿ ಕೇಸ್ ಕರ್ನಾಟಕ ರಾಜಕಾರಣಕ್ಕೆ ಗೌರವ ತರುವ ವಿಷಯವಲ್ಲ, ಹಿಂದೆ ಮೌಲ್ಯಧಾರಿತ ರಾಜಕೀಯದ ಚರ್ಚೆ ನಡೆಯುತ್ತಿತ್ತು ಆದರೆ ಈಗ ಸಿ.ಡಿ ಆಧಾರಿತ ರಾಜಕೀಯದ ಚರ್ಚೆ ನಡೆಯುತ್ತಿದೆ. ಮೌಲ್ಯಧಾರಿತವೋ, ಸಿಡಿ ಆಧಾರಿತ ರಾಜಕಾರಣ ಬೇಕೋ ಎನ್ನುವ ಬಗ್ಗೆ ಎಲ್ಲರೂ ಯೋಚಿಸಬೇಕು ಎಂದು ತಿಳಿಸಿದರು. CD –case-After –investigation-director – producer- will know-CT Ravi

ರಾಜಕಾರಣಿಗಳಿಗೆ ಜನ ಲಜ್ಜೆ-ಮನಲಜ್ಜೆ ಎರಡೂ ಇರಬೇಕು. ನಮಗೆ ನಾವೇ ಪರಿಮಿತಿ ಹಾಕಿಕೊಳ್ಳುವುದು ಮನಲಜ್ಜೆ, ಜನರಿಗೆ ಹೆದರುವುದು ಜನಲಜ್ಜೆ. ಸಾರ್ವಜನಿಕ ಜೀವನದಲ್ಲಿರುವ ನಾವು ಪರಿಶುದ್ಧ ರಾಜಕಾರಣದ ಬಗ್ಗೆ ಆಲೋಚಿಸಬೇಕು ಎಂದು ಸಿ.ಟಿ ರವಿ ತಿಳಿಸಿದರು.

Key words: CD –case-After –investigation-director – producer- will know-CT Ravi