ಸಂಕ್ರಮಣ ಬಳಿಕ ಸಿಡಿ ಬ್ಲಾಸ್ಟ್ ಹೇಳಿಕೆ ವಿಚಾರ: ಬೇಸರ ವ್ಯಕ್ತಪಡಿಸಿದ ಸಚಿವ ಕೆ.ಎಸ್ ಈಶ್ವರಪ್ಪ…

ಶಿವಮೊಗ್ಗ,ಜನವರಿ,15,2021(www.justkannada.in):  ಸಂಕ್ರಮಣ ಬಳಿಕ ಸಿಡಿ ಬ್ಲಾಸ್ಟ್ ಆಗುತ್ತದೆ ಎಂಬ ಹೇಳಿಕೆ ವಿಚಾರ: ಕುರಿತು ಬೇಸರ ವ್ಯಕ್ತಪಡಿಸಿರುವ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ, ಬಹಿರಂಗ ಹೇಳಿಕೆ ನೀಡುವುದನ್ನ ಹೈಕಮಾಂಡ್ ಗಂಭೀರವಾಗಿ ಪರಿಗಣಿಸುತ್ತದೆ. ಬಹಿರಂಗ ಹೇಳಿಕೆ ನೀಡುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ತಿಳಿಸಿದ್ದಾರೆ.jk-logo-justkannada-mysore

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ,  ಇಂತಹ ಹೇಳಿಕೆಯಿಂದ ಬೇಸರವಾಗಿದೆ. ಕೂಡಲೇ ಇಂತಹ ಹೇಳಿಕೆ ನೀಡುವುದನ್ನ ನಿಲ್ಲಿಸಬೇಕು. ಬಹಿರಂಗ ಹೇಳಿಕೆ ಪಕ್ಷಕ್ಕೆ ಹಾನಿ ಮುಜುಗರವನ್ನುಂಟು ಮಾಡುತ್ತದೆ. ಇದನ್ನ ಹೈಕಮಾಂಡ್ ಗಂಭೀರವಾಗಿ ಪರಿಗಣಿಸುತ್ತದೆ ಎಂದರು.

CD -Blast -After –sankrati- statement- Minister KS Eshwarappa ...
ಕೃಪೆ- internet

ಬೇರೆ ಪಕ್ಷದಿಂದ ಬಂದವರಿಗೆ ಸ್ಥಾನಮಾನ ಅನಿವಾರ್ಯ. ಅವರು ಬರದಿದ್ದರೇ ಮಂತ್ರಿಯಾಗುತ್ತಿರಲಿಲ್ಲ. ಬಿಜೆಪಿ ವಿರೋಧ ಪಕ್ಷದಲ್ಲಿ ಕೂರುತ್ತಿತ್ತು ಎಂದು ಈಶ್ವರಪ್ಪ ಹೇಳಿದರು.

Key words: CD -Blast -After –sankrati- statement- Minister KS Eshwarappa …