Sunday, August 2, 2026

BDA Apartments

Home Crime ಸಿಸಿ ಟಿವಿ ಮತ್ತು ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ

ಸಿಸಿ ಟಿವಿ ಮತ್ತು ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ

ಮೈಸೂರು,ಅಕ್ಟೋಬರ್,17,2024 (www.justkannada.in): ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು,  ಸಿಸಿ ಟಿವಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ನಾಶಪಡಿಸಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಮುತ್ತುರಾಯನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮನು ಎಂಬುವರಿಗೆ ಸೇರಿದ ವಾಹನಗಳು, ಸಿಸಿಟಿವಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಒಂದು ಕಾರು, ಒಂದು ಬೈಕ್ ಹಾಗೂ ಒಂದು  ಸೈಕಲ್ ನಾಶವಾಗಿದೆ. ಕೇವಲ 9 ದಿನಗಳ ಹಿಂದೆ ಖರೀದಿಸಿದ್ದ ಹೋಂಡಾ ಆಕ್ಟಿವಾ ಕೂಡ ಸುಟ್ಟು ಭಸ್ಮವಾಗಿದೆ.

ಮನು ಮತ್ತು ಕುಟುಂಬಸ್ಥರು ಮೈಸೂರಿಗೆ ತೆರಳಿದ್ದ ವೇಳೆ  ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ಮನು ಅಣ್ಣನ ಮಗ ಯಶವಂತ್ ರವರು ಈ ಕುರಿತು  ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Key words: CCTV, vehicles, fire, mysore