ಸಿಸಿಬಿ ಪೊಲೀಸರ ಕಾರ್ಯಾಚರಣೆ:  ನಾಲ್ವರು ಅಂತರಾಜ್ಯ ಸರಗಳ್ಳರು ಅಂದರ್…

ಬೆಂಗಳೂರು,ಸೆಪ್ಟಂಬರ್,5,2020(www.justkannada.in):  ಮಹಿಳೆಯರು, ವೃದ್ಧೆಯರನ್ನ ಗುರಿಯಾಗಿಸಿಕೊಂಡು ಸರ ದೋಚುತ್ತಿದ್ದ  ನಾಲ್ವರು ಅಂತರಾಜ್ಯ ಸರಗಳ್ಳರನ್ನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಅಬು ಹೈದರ್ ಆಲಿ(52), ಹಸೇನ್ ಆಲಿ(29), ಮೆಹದಿ ಹಸನ್(45),  ಸಾಧಿಕ್ ಆಲಿ(34) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 85 ಲಕ್ಷ ಮೌಲ್ಯದ  1.7 ಕೆಜಿ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ.  ಬಂಧಿತ ಆರೋಪಿಗಳಲ್ಲಿ ಅಬು ಹೈದರ್ ಆಲಿ ಪ್ರಮುಖ ಆರೋಪಿಯಾಗಿದ್ದು, ಮಹಿಳೆಯರು, ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ಸರ ದೋಚುತ್ತಿದ್ದರು. ಈ ನಡುವೆ  ಕರ್ನಾಟಕ, ತಮಿಳುನಾಡು, ಜಾರ್ಖಾಂಡ್, ಆಂಧ್ರ ಪ್ರದೇಶಗಳಲ್ಲಿ ಈ ಆರೋಪಿಗಳು ಅಪರಾಧ ಕೃತ್ಯಗಳನ್ನ ಎಸಗಿದ್ದಾರೆ.ccb-police-four-interstates-chain-thief-arrest

ಬಂಧಿತ ಆರೋಪಿಗಳು  ಇರಾನಿ ಗ್ಯಾಂಗ್ ಸದಸ್ಯರು ಎನ್ನಲಾಗಿದ್ದು, ಹಲವು ಬಾರಿ ದಸ್ತಗಿರಿ ಮಾಡಿದ್ದರೂ ತಮ್ಮ ಕೃತ್ಯವನ್ನು ಮುಂದುವರೆಸಿದ್ದರು. ಕಳವು ಸುಲಿಗೆ ಮಾಡಿದ್ದ ಚಿನ್ನಾಭರಣಗಳನ್ನ ಕಲ್ಬುರ್ಗಿ ಜಿಲ್ಲೆಯಲ್ಲಿ ಮಧ್ಯಪ್ರದೇಶ, ಜಾರ್ಖಾಂಡ್ ರಾಜ್ಯಗಳಲ್ಲಿ ವಿಲೇವಾರಿ ಮಾಡುತ್ತಿದ್ದರು ಎನ್ನಲಾಗಿದೆ.

Key words: CCB- police- four -interstates –chain thief-arrest