ರೌಡಿಗಳಿಗೆ ಗನ್ ಪೂರೈಸುತ್ತಿದ್ದ  6ಮಂದಿ ಆರೋಪಿಗಳು ಅರೆಸ್ಟ್: ನಾಡ ಪಿಸ್ತೂಲ್ ಮತ್ತು ಸಜೀವ ಗುಂಡುಗಳು ವಶಕ್ಕೆ…

ಬೆಂಗಳೂರು,ಡಿ,30,2019(www.justkannada.in): ರೌಡಿಗಳಿಗೆ ಗನ್ ಪೂರೈಸುತ್ತಿದ್ದ 6 ಮಂದಿ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇಸ್ಲಾಂ, ಜಾವಿದ್, ನಾಸೀರ್, ರಿಜ್ವಾನ್, ರಾಯರೆಡ್ಡಿ ಸೇರಿ ಆರು ಮಂದಿಯನ್ನ ಸಿಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಇಸ್ಲಾಂ ಮತ್ತು ಗ್ಯಾಂಗ್ ಹಾವೇರಿಯಲ್ಲಿ ಗಲ್ಲಿಗಳಲ್ಲಿ ಗನ್ ತಯಾರಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.  ಮೈಸೂರು ಮತ್ತು ಬೆಂಗಳೂರಿನಲ್ಲಿ 15 ಕ್ಕೂ ಹೆಚ್ಚು ಗನ್ ಗಳನ್ನ ಮಾರಾಟ ಮಾಡಿದ್ದಾರೆ. ಎನ್ನಲಾಗಿದೆ.

ಈ ನಡವೆ ನಿನ್ನೆ ಗನ್ ಮಾರಾಟ ಮಾಡುತ್ತಿದ್ದ ವೇಳೆ ಆರು ಮಂದಿ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ನಾಡ ಪಿಸ್ತೂಲ್ ಮತ್ತು 8 ಸಜೀವ ಗುಂಡುಗಳನ್ನ ವಶಕ್ಕೆ ಪಡೆದಿದ್ದಾರೆ.

Key words: ccb-Arrest – six accused –supplying- guns –