ಸಿಬಿಐ ಅಧಿಕಾರಿಗಳು ನನ್ನ ಪಿಎ ಮೇಲೆ ಹಲ್ಲೆ ಮಾಡಿದ್ದಾರೆ-ನಂಜಾವಧೂತ ಶ್ರೀಗಳ ಬಳಿ ನೋವು ತೋಡಿಕೊಂಡ ಡಿ.ಕೆ ಶಿವಕುಮಾರ್…

ಬೆಂಗಳೂರು,ಅಕ್ಟೋಬರ್,6,2020(www.justkannada.in):  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ನಿನ್ನೆ ಸಿಬಿಐ ದಾಳಿ ಬೆನ್ನಲ್ಲೆ ಇಂದು ನಂಜಾವಧೂತ ಶ್ರೀಗಳು ಡಿ.ಕೆ ಶಿವಕುಮಾರ್ ಅವರನ್ನ ಭೇಟಿಯಾಗಿ ಧೈರ್ಯ ತುಂಬಿದ್ದಾರೆ.jk-logo-justkannada-logo

ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ ನಂಜಾವಧೂತ ಶ್ರೀಗಳು ಡಿ.ಕೆ ಶಿವಕುಮಾರ್ ಬಳಿ ಚರ್ಚಿಸಿದರು. ಈ ವೇಳೆ ಡಿ.ಕೆ ಶಿವಕುಮಾರ್ ನಂಜಾವಧೂತ ಶ್ರೀಗಳ ಬಳಿ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಸಿಬಿಐ ದಾಳಿ ನಡೆದದ್ದಕ್ಕೆ ನನಗೆ ಬೇಸರವಿಲ್ಲ. ಇದೆಲ್ಲವೂ ರಾಜಕೀಯ ಷಡ್ಯಂತ್ರ. ನಾನು ಕೆಪಿಸಿಸಿ ಅಧ್ಯಕ್ಷನಾದ ಬಳಿಕ ತುಂಬಾ ಆಕ್ಟೀವ್ ಆಗಿ ಓಡಾಡುತ್ತಿದ್ದೆ. ಜತೆಗೆ ಬೈಎಲೆಕ್ಷನ್ ಇದೆ ಅಂತಾ ನನ್ನನ್ನ ಟಾರ್ಗೆಟ್ ಮಾಡಿದ್ದಾರೆ. ಎಲ್ಲವನ್ನೂ ನೋಡಿದ್ದೀನಿ, ಇದು ಒಂದು ಭಾಗ. ಸಿಬಿಐ ಅಧಿಕಾರಿಗಳು ನನಗೆ ಕಿರುಕುಳ ನೀಡಿದ್ದಾರೆ. ನನ್ನ ಸ್ಟಾಫ್,  ಪಿಎ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಂಜಾವಧೂತ ಶ್ರೀಗಳ ಬಳಿ  ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ ಎನ್ನಲಾಗಿದೆ.cbi-officers-assaulted-my-pa-dk-shivakumar-nanjavadutha-sri

ಸಿಬಿಐ ದಾಳಿ ನಡೆದದ್ದಕ್ಕೆ ನನಗೆ ಬೇಸರವಿಲ್ಲ.  ಆದ್ರೆ ಮಗಳ ಮದುವೆಗೆ ತಂದ ಚಿನ್ನವನ್ನ ಜಪ್ತಿ ಮಾಡಿದ್ದಾರೆ. ಇದೆಲ್ಲವೂ ರಾಜಕೀಯ ಷಡ್ಯಂತ್ರ. ನನ್ನ ಮಗಳ ಮದುವೆಗಾಗಿ ಖರೀದಿಸಿಟ್ಟಿದ್ದ ಚಿನ್ನಾಭರಣಗಳನ್ನೂ ಸೀಜ್ ಮಾಡಿ ತೆಗೆದುಕೊಂಡು ಹೋಗಿರುವುದು  ಬೇಸರ ತಂದಿದೆ ಎಂದು ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Key words: CBI –officers- assaulted -my PA – DK Shivakumar-nanjavadutha sri