ಪೂಜೆ ಮಾಡುವ ವೇಳೆ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಯುವಕ.

0
4

ಮಂಡ್ಯ,ಜುಲೈ,13,2022(www.justkannada.in):  ಕಾಲುಜಾರಿ ಕಾವೇರಿ ನದಿಯಲ್ಲಿ ಯುವಕ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಸಂಗಮ ಬಳಿ ನಡೆದಿದೆ.

ಬೆಂಗಳೂರಿನ ಯಲಹಂಕ ನಿವಾಸಿ  ಅಶೋಕ್(26) ನೀರುಪಾಲಾದ ಯುವಕ.  ಅಶೋಕ್ ತನ್ನ ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆ ಪೂಜೆಗೆಂದು ಸಂಗಮಕ್ಕೆ ಆಗಮಿಸಿದ್ದು ಸ್ನಾನ ಮಾಡುವ ವೇಳೆ ಕಾಲು ಜಾರಿ ಬಿದ್ದು ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.

ಯುವಕ ಅಶೋಕ್ ಗಾಗಿ 30ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ

Key words: caveri-river-boy-death