ಜಾತಿ ಸಮೀಕ್ಷೆ ಹಿನ್ನೆಲೆ: ದಸರಾ ರಜೆ ಅ.17ರವರೆಗೆ ವಿಸ್ತರಿಸುವಂತೆ ಮನವಿ

ಬೆಂಗಳೂರು, ಅಕ್ಟೋಬರ್,7,2025 (www.justkannada.in):  ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಯುತ್ತಿದ್ದು ಸಮೀಕ್ಷೆ ಕಾರ್ಯದಲ್ಲಿ ಶಿಕ್ಷಕರು ತೊಡಗಿರುವ ಹಿನ್ನೆಲೆಯಲ್ಲಿ ‍ದಸರಾ ರಜೆ ವಿಸ್ತರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.

ಸೆಪ್ಟಂಬರ್ 20 ರಿಂದ ಅಕ್ಟೋಬರ್ 7 ರವರೆಗೆ ದಸರಾ ರಜೆ ನೀಡಲಾಗಿತ್ತು.  ಪ್ರಾಥಮಿಕ ಪ್ರೌಢಶಾಲೆಗಳಿಗೆ ದಸರಾ ರಜೆ ಘೋಷಿಸಲಾಗಿತ್ತು. ಆದರೆ  ಸೆಪ್ಟಂಬರ್ 22 ರಿಂದ ಶಿಕ್ಷಕರು ಜಾತಿಗಣತಿ ಶುರು ಮಾಡಿದ್ದಾರೆ. ಸಮೀಕ್ಷೆ ಬೆಂಗಳೂರಿನಲ್ಲಿ ಇನ್ನೂ ಗೊಂದಲದಲ್ಲಿ ನಡೆಯುತ್ತಿದೆ. ಹೀಗಾಗಿ ಶಿಕ್ಷಕರು ದೈಹಿಕ ಬೌದ್ದಿಕವಾಗಿ ಒತ್ತಡದಲ್ಲಿದ್ದಾರೆ.

ಅವರಿಗೆ ದೈಹಿಕ ಮಾನಸಿಕ ವಿರಾಮದ ಅವಶ್ಯಕತೆ ಇದೆ.   ಅದ್ದರಿಂದ ದಸರಾ ರಜೆಯನ್ನ ಅಕ್ಟೋಬರ್ 17ರವರೆಗೆ ವಿಸ್ತರಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ  ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.

Key words: Caste survey, extend Dasara holiday, till,  October 17, Appeal