ಕಾವೇರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪೋಷಕರಿಗೆ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ

ಮೈಸೂರು, ಡಿಸೆಂಬರ್ 19, 2023 (www.justkannada.in): ಮೈಸೂರಿನ ಆಲನಹಳ್ಳಿಯಲ್ಲಿರುವ ಕಾವೇರಿ ಪಿಯು ಕಾಲೇಜಿನಲ್ಲಿ ವಿದ್ಯಾ ಸಾಧನ ಸಂಸ್ಥೆಯಿಂದ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳ ಕೌಶಲ್ಯಕ್ಕೆ ಅನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಡಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪೋಷಕರಿಗೆ ವೃತ್ತಿ ಆಯ್ಕೆಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು.

ನೀಟ್/ಜೆಇಇ/ಸಿಇಟಿ/ಐಐಎಂ(ಐಪಿಮ್ಯಾಟ್)/ಕೆ-ಸಿಇಟಿ ಇತ್ಯಾದಿಗಳ ಬಗ್ಗೆ ಆಳವಾದ ಮಾಹಿತಿ ನೀಡಲಾಯಿತು. ವೈಜ್ಞಾನಿಕ ಫಿಂಗರ್‌ಪ್ರಿಂಟ್ ಬ್ರೈನ್ ಮ್ಯಾಪಿಂಗ್ ಅನಾಲಿಸಿಸ್ ಮತ್ತು ಸೈಕೋಮೆಟ್ರಿಕ್ ಸಾಫ್ಟ್‌ವೇರ್ ಅನಾಲಿಸಿಸ್ ಮೂಲಕ ಮಕ್ಕಳ ಪ್ರತಿಭೆಯನ್ನು ಗುರುತಿಸುವ ವಿಶಿಷ್ಟ ಸಾಧನಗಳ ಬಗ್ಗೆ ಪೋಷಕರಿಗೆ ವಿವರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಉಚಿತ ವೃತ್ತಿ-ಪ್ರತಿಭೆ ಹೊಂದಾಣಿಕೆ ಕುರಿತ 8 ಪುಟಗಳ ವರದಿಯನ್ನು ನೀಡಲಾಯಿತು. ಅಗತ್ಯ ಮಾಹಿತಿ ನೆರವು ಅಗತ್ಯವಿರುವ 10 ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಮಾರ್ಗದರ್ಶನ ಮತ್ತು ಸೈಕೋಮೆಟ್ರಿಕ್ ವರದಿಯನ್ನು ನೀಡುವ ಭರವಸೆಯನ್ನು ವಿದ್ಯಾ ಸಾಧನಾ ಸಂಸ್ಥೆ ನೀಡಿದೆ. ಆಸಕ್ತರು ಮೊ: 88617 89467 ಸಂಪರ್ಕಿಸಬಹುದಾಗಿದೆ.

English Summary:

A Free Career Guidance Session was conducted By VIDYA SAADHANA- CAUVERY PU COLLEGE, Allanahali, Mysore with Concept of Talent Based Career Choice. It was an session about  understanding Talent of Students and plan Career Options accordingly. Parents were informed about  career options. Indepth Information was given about NEET/JEE/CET/IIM(IPMAT) /K-CET etc.  Also  Parents were explained about unique tools to identify Talent of Children by Scientific Fingerprint Brain Mapping Analysis and Psychometric Software Analysis. All Participants were given free Career-Talent Compatibility 8 page report.  VIDYA SADHANA has assured free career guidance and psychometric report to any Class 10th Students who require our Help can contact: 88617 89467