ಮಹಾರಾಣಿ ಕಾಲೇಜು ಆವರಣದಲ್ಲಿ ಕಾರು ಅಪಘಾತ: ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರ.

ಬೆಂಗಳೂರು,ಅಕ್ಟೋಬರ್,7,2023(www.justkannada.in): ಬೆಂಗಳೂರಿನ ಮಹಾರಾಣಿ ಕಾಲೇಜು ಆವರಣದಲ್ಲಿ ಪ್ರೊಫೆಸರ್ ಕಾರು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿನೀಯರ ಸ್ಥಿತಿ ಗಂಭೀರವಾಗಿರುವ ಘಟನೆ ಇಂದು ನಡೆದಿದೆ.

ಮಹಾರಾಣಿ ಕಾಲೇಜಿನ ಇಂಗ್ಲೀಷ್ ಪ್ರೊಫೆಸರ್ ನಾಗರಾಜ್ ಅವರ ಕಾರು ಇಬ್ಬರು ವಿದ್ಯಾರ್ಥಿನೀಯರು ಮತ್ತು ಮ್ಯೂಸಿಕ್ ಟೀಚರ್ ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಿಕಾಂ  ವಿದ್ಯಾರ್ಥಿನಿ  ಅಶ್ವಿನಿ ಸೇರಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮ್ಯೂಸಿಕ್ ಟೀಚರ್ ಜ್ಯೋತಿ ಅವರಿಗೂ ಗಾಯಗಳಾಗಿದೆ.

ಪ್ರೊ.ನಾಗರಾಜ್ ಅವರು ಓವರ್ ಸ್ಪೀಡ್ ನಿಂದ ಕಾರು ಚಲಾಯಿಸಿದ್ದು ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Car accident -Maharani -College – Bangalore