ಮರಿಯಮ್ಮನಹಳ್ಳಿ ಬಳಿ ಕಾರು ಅಪಘಾತ ಪ್ರಕರಣ ಕುರಿತು ಬಳ್ಳಾರಿ ಎಸ್ಪಿ ಸಿ.ಕೆ ಬಾಬಾ ಸ್ಪಷ್ಟನೆ ಕೊಟ್ಟಿದ್ದು ಹೀಗೆ……

ಬಳ್ಳಾರಿ,ಫೆ,13,2020(www.justkannada.in): ಮರಿಯಮ್ಮನಹಳ್ಳಿ ಬಳಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತವಾದ ಕಾರಿನಲ್ಲಿ ಸಚಿವ ಆರ್.ಅಶೋಕ್ ಅವರ ಪುತ್ರ ಇದ್ದರು ಎಂಬ ಸುದ್ದಿ ಹರಡಿರುವ ಹಿನ್ನೆಲೆ ಈ ಬಗ್ಗೆ ಬಳ್ಳಾರಿ ಎಸ್ಪಿ ಸಿ.ಕೆ ಬಾಬಾ ಸ್ಪಷ್ಟನೆ ನೀಡಿದ್ದಾರೆ.

ಅಪಘಾತವಾದ ಕಾರಿನಲ್ಲಿ ಸಚಿವರ ಪುತ್ರ ಇರಲಿಲ್ಲ. ಪ್ರಕರಣ ಸಂಬಂಧ ನನ್ನ ಮೇಲೆ ಯಾರ ಒತ್ತಡವಿಲ್ಲ. ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಕೆ ಬಾಬಾ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಳ್ಳಾರಿ ಎಸ್ಪಿ ಸಿ.ಕೆ ಬಾಬಾ, ಈ ಕೇಸ್ ನಲ್ಲಿ ಕರ್ತವ್ಯಲೋಪವಾಗಿಲ್ಲ.  ಕಾರಿನಲ್ಲಿ ಸಚಿವರ ಪುತ್ರ ಇದ್ದರು ಎಂಬುದು ವದಂತಿ. ಘಟನೆ ನಡೆದಾಗ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಈ ನಡುವೆ ಘಟನೆಯಲ್ಲಿ  ರವಿನಾಯ್ಕ ಎಂಬಾತ ಮೃತಪಟ್ಟಿದ್ದಾನೆ. ಇನ್ನು ಕಾರಿನಲ್ಲಿ ಐವರು ಇದ್ದರು. ಕಾರನ್ನ ರಾಹುಲ್ ಎಂಬಾತ ಚಲಾಯಿಸುತ್ತಿದ್ದ. ಕಾರು ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Key words: car accident-case- minister-r.ashok-ballari –SP-CK baba