ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ: ಕೋಳಿಗಳಿಗೆ ಮುಗಿಬಿದ್ದ ಜನರು

ಶಿವಮೊಗ್ಗ,ಜುಲೈ,2,2025 (www.justkannada.in): ಚಾಲಕನ ನಿಯಂತ್ರಣ ತಪ್ಪಿ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ 700ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಸಾಗರ ತಾಲೂಕಿನ ಆನಂದಪುರ ಸಮೀಪದ ಮುಂಬಾಳು ತಿರುವಿನಲ್ಲಿ ಈ ಘಟನೆ ನಡೆದಿದೆ. ಕಡೂರಿನಿಂದ ಸಾಗರಕ್ಕೆ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿದ್ದು ಕ್ಯಾಂಟರ್ ನಲ್ಲಿದ್ದ 1700 ಕೋಳಿಗಳ ಪೈಕಿ 700 ಕೋಳಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಕ್ಯಾಂಟರ್ ಪಲ್ಟಿಯಾಗುತ್ತಿದ್ದಂತೆ ಕೋಳಿಗಳನ್ನು ಎತ್ತಿಕೊಳ್ಳಲು ಜನ ಮುಗಿಬಿದ್ದರು.

ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.vtu

Key words: Driver, loses, control , Canter ,overturns,