‘ಕ್ಯಾನ್ಸರ್ ಕೇರ್ ಗೀವರ್ಸ್ ಕೇರ್ ಲಕ್ಷ್ಮೀಶ ಫೌಂಡೇಶನ್’ ನ 5ನೇ ಸಂಸ್ಥಾಪನಾ ದಿನಾಚಾರಣೆ

ಬೆಂಗಳೂರು,ಅಕ್ಟೋಬರ್,13,2025 (www.justkannada.in): ಕ್ಯಾನ್ಸರ್ ಕೇರ್ ಗೀವರ್ಸ್ ಕೇರ್ ಲಕ್ಷ್ಮೀಶ ಫೌಂಡೇಶನ್ ನ ಐದನೇ ಸಂಸ್ಥಾಪನ ದಿನಾಚರಣೆ 12.10.2025  ಭಾನುವಾರ ಆರ್. ವಿ. ಡೆಂಟಲ್ ಕಾಲೇಜಿನ ಪಾಂಡು ಸಭಾಂಗಣದಲ್ಲಿ ನಡೆಯಿತು.

ವಯೋಲಿನ್ ಮಾಂತ್ರಿಕರಾದ, ವಿಶ್ವ ವಿಖ್ಯಾತರಾದ  ಮೈಸೂರು ನಾಗರಾಜ್ ಮತ್ತು ಡಾ. ಮೈಸೂರು ಮುಂಜುನಾಥ ಅವರ ನಾದೋತ್ಸವ ಸಂಗೀತ ಪ್ರೇಮಿಗಳನ್ನು ರಂಜಿಸಿತು. ಕ್ಯಾನ್ಸರ್ ಉಳ್ಳವರ ಮಕ್ಕಳು ಮತ್ತು ಆರ್ಥಿಕ ಸಂಕಷ್ಟದಲ್ಲಿ ಇರುವವರ ಮಕ್ಕಳಿಗೆ ಶಿಕ್ಷಣಕ್ಕೆ ನೆರವಾಗುವುದಕ್ಕಾಗಿ ಈ ನಿಧಿ ಸಂಗ್ರಹಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಲಕ್ಷ್ಮೀಶ ಫೌಂಡೇಶನ್ ನ ಉದ್ದೇಶ….

ಕ್ಯಾನ್ಸರ್ ಹಾಗೂ ದೀಘ೯ಕಾಲೀನ ಕಾಯಿಲೆಯಿಂದ ಬಳಲುತ್ತಿರುವವರ ನೋವು ಒಂದೆಡೆಯಾದರೆ ಅವರನ್ನು ಆರೈಕೆ ಮಾಡುತ್ತಿರುವವರ ಆತಂಕ, ನೋವು,ಸಂಕಟ ದು:ಖ ಅತೀವ.

*ಅಂಥವರಿಗೆ ಸಾಂತ್ವನ, ಭಾವನಾತ್ಮಕ ಬೆಂಬಲ,ಆತ್ಮವಿಶ್ವಾಸ ಹೆಚ್ಚಿಸುವುದು.

*ಆರೈಕೆ ಮಾಡುವವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮಹತ್ವ ತಿಳಿಸುವುದು.

*ರೋಗಿಯ ಕಾಯಿಲೆ ಉಲ್ಬಣವಾದರೂ ಅದನ್ನು ನಿಭಾಯಿಸುವ ಮನಸ್ಥಿತಿ ಆರೈಕೆ ಮಾಡುವವರಲ್ಲಿ ಕಡಿಮೆಯಾಗದಂತೆ ಕಾಪಾಡುವುದು.

*ಕ್ಯಾನ್ಸರ್ ಅಥವಾ ದೀಘ೯ಕಾಲಿಕ ಕಾಯಿಲೆ ಅಂದಾಕ್ಷಣ ಸಾವು ನಿಶ್ಚಿತವೆಂದಲ್ಲ. ಒಂದು ವೇಳೆ ಅಂತಹ ಸಂದಭ೯ ಬಂದರೂ ಅದನ್ನು ಸ್ವೀಕರಿಸುವ ಮನೋಸ್ಥೈರ್ಯವನ್ನು ಆರೈಕೆ ಮಾಡುವ ಕುಟುಂಬದವರಿಗೆ ಅಥ೯ ಮಾಡಿಸುವುದು.

*ಆರೈಕೆ ಮಾಡುವವರ ನೆಮ್ಮದಿ, ಶಾಂತಿ ರೋಗಿಯ ಮೇಲೆ ಸಕಾರಾತ್ಮಕ ಪರಿಣಾಮವನ್ನುಂಟು ಮಾಡುವ ಕುರಿತು ಅರಿವು,

ಲಕ್ಷ್ಮೀಶ ಫೌಂಡೇಶನ್ ನ ಗುರಿ…

*ಹೆಚ್ಚಿನ ಸಂಖ್ಯೆಯ ಅರೈಕೆದಾತರಿಗೆ ನಿರಂತರ ಸಂಪಕ೯,ಸಂವಹನ,ಭಾವನಾತ್ಮಕ ಸಹಾಯ,ಆಪ್ತ ಸಲಹೆ, ಸಪೋಟ೯ ಗ್ರೂಪ್ ಮೀಟಿಂಗ್ ಹೀಗೆ ಹಲವು ವಿಧಗಳಿಂದ ಅವರ ಪಾಲಿಗೆ ಭರವಸೆಯಾಗಿ ನಿಲ್ಲುವುದು.

*ಕಾಯಿಲೆಯಿಂದ ಬಳಲುತ್ತಿರುವ ಕುಟುಂಬದವರ ಮಕ್ಕಳಿಗೆ ಶೈಕ್ಷಣಿಕ ನೆರವು.

*ಉಪಯುಕ್ತವಾದ ಆದರೆ ನಾವು ಬಳಸದಿರುವ ವಸ್ತುಗಳನ್ನು ಅಗತ್ಯವಿರುವವರಿಗೆ ತಲುಪಿಸುವುದು.

*ಸಾಹಿತ್ಯ,ಸಂಗೀತ,ಜೀವನ ಕಲೆ ಮುಂತಾದ ಕಾಯ೯ಕ್ರಮಗಳ ಆಯೋಜನೆ.

ಹೆಚ್ಚಿನ ನೆರವು, ಅರಿವು ಲಕ್ಷೀಶ ಪ್ರತಿಷ್ಠಾನದ ಧ್ಯೇಯೋದ್ದೇಶವಾಗಿದೆ.

Key words: ‘Cancer Care Givers Care Laxmish Foundation, 5th Foundation Day